×
Ad

ಅಮಿತಾಬ್ ಬಚ್ಚನ್‍ಗೆ ಮತ್ತೆ ಕೋವಿಡ್ ಸೋಂಕು

Update: 2022-08-24 08:13 IST

ಮುಂಬೈ: ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಮಂಗಳವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಕೊರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ತಕ್ಷಣ, ತಮ್ಮ ಸಂಪರ್ಕದಲ್ಲಿದ್ದ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ಮಾಡಿದ್ದಾರೆ.

"ಟಿ 4388- ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.. ನನ್ನ ಅಕ್ಕಪಕ್ಕ ಮತ್ತು ಸುತ್ತಮುತ್ತಲು ಇದ್ದ ಎಲ್ಲರೂ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

79 ವರ್ಷ ವಯಸ್ಸಿನ ಈ ಹಿರಿಯ ನಟನಿಗೆ ಸೋಂಕು ತಗುಲಿರುವುದು ಇದು ಎರಡನೇ ಬಾರಿ. 2020ರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಪುತ್ರ ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಬಚ್ಚನ್, ಮೊಮ್ಮಗಳು ಆರಾಧ್ಯ ಬಚ್ಚನ್ ಅವರಿಗೂ ಸೋಂಕು ತಲುಗಿತ್ತು. ಅಮಿತಾಬ್ ಬಚ್ಚನ್ ಅವರು ಅಯಾ ಮುಖರ್ಜಿಯವರ "ಬ್ರಹ್ಮಾಸ್ತ್ರ ಪಾರ್ಟ್ ವನ್: ಶಿವ" (Brahmastra Part One: Shiva), ವಿಕಾಸ್ ಭಲ್ ಅವರ "ಗುಡ್‍ಬೈ" (Goodbye) ಮತ್ತು "ಉಂಚೈ" ಹಾಗೂ "ಪ್ರಾಜೆಕ್ಟ್ ಕೆ" (UUnchai and Project K) ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News