ಲಾಕ್‌ಡೌನ್‌ ಸಂದರ್ಭ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ್ದ ರೈತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2022-08-24 06:34 GMT

ಹೊಸದಿಲ್ಲಿ: 2020 ರ ಕೋವಿಡ್ ಲಾಕ್‌ಡೌನ್‌(Lockdown)ನಿಂದಾಗಿ  ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಮನೆಗೆ ಕಳುಹಿಸಿದ್ದ ರೈತರೊಬ್ಬರು (farmer) ದಿಲ್ಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.

ಕೋವಿಡ್-ಪ್ರೇರಿತ ಲಾಕ್‌ಡೌನ್‌ನಿಂದ ಸಿಲುಕಿರುವ ಸಾವಿರಾರು ವಲಸಿಗರು ತಮ್ಮ ಹಳ್ಳಿಗಳನ್ನು ತಲುಪಲು ಹೆಣಗಾಡುತ್ತಿದ್ದಾಗ 55 ರ ವಯಸ್ಸಿನ ಪಪ್ಪನ್ ಸಿಂಗ್ ಗೆಹ್ಲೋಟ್ ಅವರು ತಮ್ಮ ಉದ್ಯೋಗಿಗಳಿಗೆ ತಮ್ಮ ಮನೆಗಳಿಗೆ ಮರಳಲು ವಿಮಾನ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ದೇಶದ ಎಲ್ಲರ ಗಮನ ಸೆಳೆದಿದ್ದರು.

ಪೊಲೀಸರ ಪ್ರಕಾರ, ರಾಷ್ಟ್ರ ರಾಜಧಾನಿಯ ಅಲಿಪೋರ್ ಪ್ರದೇಶದ ತನ್ನ ಮನೆಯ ಮುಂಭಾಗದಲ್ಲಿರುವ ದೇವಾಲಯದ ಸೀಲಿಂಗ್ ಫ್ಯಾನ್‌ಗೆ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಗೆಹ್ಲೋಟ್ ತನ್ನ ಆತ್ಮಹತ್ಯೆಗೆ 'ಅನಾರೋಗ್ಯ' ಕಾರಣ ಎಂದು ಹೇಳಿರುವ ಆತ್ಮಹತ್ಯಾ ಟಿಪ್ಪಣಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೆಹ್ಲೋಟ್ ಅವರು  ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದಾಗ ಮತ್ತೊಮ್ಮೆ ವಿಮಾನ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ತಮ್ಮ ಉದ್ಯೋಗಿಗಳನ್ನು ಕೆಲಸಕ್ಕೆ ಕರೆಸಿಕೊಂಡಿದ್ದರು.

ಇದನ್ನೂ ಓದಿ: ಮೋದಿ ಬಗೆಗಿನ ಕೃತಿಯನ್ನು ಭಗವದ್ಗೀತೆಗೆ ಹೋಲಿಸಿದ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News