ಬಿಜೆಪಿ ಸೇರಲು 20 ಕೋಟಿ, ಇತರರನ್ನು ಕರೆತಂದರೆ 25 ಕೋಟಿ ರೂ. ಆಮಿಷ: ಎಎಪಿ ಆರೋಪ

Update: 2022-08-24 09:31 GMT

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಆಮ್ ಆದ್ಮಿ ಪಕ್ಷವು ಇಂದು ತರಾಟೆಗೆ ತೆಗೆದುಕೊಂಡಿದ್ದು ದಿಲ್ಲಿ ಸರಕಾರವನ್ನು " ಕುತಂತ್ರದಿಂದ" ಬೀಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ತನ್ನ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಕ್ಷ ಆರೋಪಿಸಿದೆ.

ನಮ್ಮ ಶಾಸಕರಿಗೆ ಪಕ್ಷಕ್ಕೆ ಸೇರಿದರೆ ತಲಾ  20 ಕೋಟಿ ಹಾಗೂ  ಇತರ ಶಾಸಕರನ್ನು ತಮ್ಮೊಂದಿಗೆ ಕರೆತಂದರೆ  25 ಕೋಟಿ  ರೂ. ನೀಡಲಾಗುವುದು(offered ₹ 20-25 crore to switch sides and bring along fellow MLAs) ಎಂದು ಬಿಜೆಪಿ  ಆಫರ್ ನೀಡಿದೆ ಎನ್ನುವುದಾಗಿ ಆಪ್ ಗಂಭೀರ ಆರೋಪ ಮಾಡಿದೆ.

ಎಎಪಿ ಶಾಸಕರಿಗೆ ನಗದು ಹಾಗೂ  ಬೆದರಿಕೆಯ ಆಮಿಷ ಒಡ್ಡಲು ಯತ್ನಿಸುತ್ತಿದ್ದಾರೆ ಎಂದು ಐವರು ಹಿರಿಯ ಆಪ್ ನಾಯಕರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಎಪಿಯ ರಾಷ್ಟ್ರೀಯ ವಕ್ತಾರ ಹಾಗೂ  ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (AAP's national spokesperson and Rajya Sabha MP Sanjay Singh) ಅವರು ಪ್ರಧಾನಿ ಮೋದಿ ನೇತೃತ್ವದ ಸರಕಾರವು ರಾಷ್ಟ್ರ ರಾಜಧಾನಿಯಲ್ಲಿ ಸರಕಾರವನ್ನು ಉರುಳಿಸಲು ಕೇಂದ್ರ ಏಜೆನ್ಸಿಗಳನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು "ಬಹಿರಂಗಪಡಿಸುತ್ತೇನೆ" ಎಂದು ಹೇಳಿದ್ದಾರೆ.

"ದಿಲ್ಲಿಯ ಶಾಸಕರನ್ನು ಒಡೆಯುವ ಪ್ರಯತ್ನಗಳು ಆರಂಭವಾಗಿವೆ. ಬಿಜೆಪಿ ಸದಸ್ಯರು ಎಎಪಿ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ 20 ಕೋಟಿ ರೂ.ಯ ಆಫರ್ ತೆಗೆದುಕೊಳ್ಳಿ ಅಥವಾ ಸಿಸೋಡಿಯಾ ಅವರಂತೆ ಸಿಬಿಐ ಪ್ರಕರಣಗಳನ್ನು ಎದುರಿಸಿ ಎಂದು ಅವರು ಬೆದರಿಸುತ್ತಿತ್ತಾರೆ

ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಹಾಗೂ  ಕುಲದೀಪ್ ಕುಮಾರ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಸಂಪರ್ಕಿಸಿದ್ದಾರೆ. ನಮ್ಮ ಶಾಸಕರು ಅವರೊಂದಿಗೆ "ಸ್ನೇಹ ಸಂಬಂಧ" ಹೊಂದಿದ್ದಾರೆ ಎಂದು ಸಿಂಗ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇತರ ನಾಲ್ವರು ಎಎಪಿ ಶಾಸಕರು ತಮ್ಮನ್ನು ಬಿಜೆಪಿ ನಾಯಕರು ಹೇಗೆ ಸಂಪರ್ಕಿಸಿದರು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News