×
Ad

ಆಸ್ಪತ್ರೆಯಲ್ಲಿರುವ ಕಾಮೆಡಿಯನ್ ರಾಜು ಶ್ರೀವಾಸ್ತವಗೆ 15 ದಿನಗಳ ನಂತರ ಪ್ರಜ್ಞೆ ಮರಳಿದೆ: ವರದಿ

Update: 2022-08-25 14:45 IST
Photo:twitter

ಹೊಸದಿಲ್ಲಿ: ಹೃದಯಾಘಾತದಿಂದ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಮಿಡಿಯನ್  ರಾಜು ಶ್ರೀವಾಸ್ತವ ಅವರಿಗೆ ಗುರುವಾರ ಪ್ರಜ್ಞೆ ಮರಳಿದೆ ಎಂದು ವರದಿಯಾಗಿದೆ.

15 ದಿನಗಳ ನಂತರ ರಾಜು ಶ್ರೀವಾಸ್ತವ ಅವರಿಗೆ ಇಂದು ಪ್ರಜ್ಞೆ ಬಂದಿದೆ(Raju Srivastava Gains Consciousness After 15 Days).  ಅವರನ್ನು ದಿಲ್ಲಿಯ ಏಮ್ಸ್‌ನಲ್ಲಿ ವೈದ್ಯರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಗೆ ನಟನ ಆಪ್ತ ಕಾರ್ಯದರ್ಶಿ ಗಾರ್ವಿತ್ ನಾರಂಗ್ ಹೇಳಿದ್ದಾರೆ.

ಹೃದಯಾಘಾತದಿಂದ ರಾಜು ಶ್ರೀವಾಸ್ತವ ಅವರನ್ನು ಆಗಸ್ಟ್ 10 ರಂದು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಎದೆ ನೋವು ಅನುಭವಿಸುತ್ತಿದ್ದರು ಹಾಗೂ  ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದುಬಿದ್ದರು.

 ರಾಜು ಶ್ರೀವಾಸ್ತವ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ರಾಜು ಶ್ರೀವಾಸ್ತವ ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News