×
Ad

ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಕ್ಲಬ್ ಮಾಲಕ, ಡ್ರಗ್ ಡೀಲರ್ ಬಂಧನ

Update: 2022-08-27 10:24 IST
Photo:instagram

ಹೊಸದಿಲ್ಲಿ: ನಟಿ ಹಾಗೂ  ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ(Sonali Phogat Murder Case) ) ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಸೋನಾಲಿ ಸಾವಿನ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದ ಗೋವಾ  ಕ್ಲಬ್‌ನ ಮಾಲಕ ಹಾಗೂ ಡ್ರಗ್ ಡೀಲರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು  NDTV ವರದಿ ಮಾಡಿದೆ.

ಈ ಇಬ್ಬರ ಬಂಧನದೊಂದಿಗೆ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಸೋನಾಲಿ ಪೋಗಟ್ ಅವರ ಅಸಹಜ ಸಾವಿಗೆ ಸಂಬಂಧಿಸಿ ಬಂಧಿತರ  ಸಂಖ್ಯೆ ನಾಲ್ಕಕ್ಕೇರಿದೆ.

ಸೋನಾಲಿಯ ಇಬ್ಬರು ಸಹಚರರಾದ ಸುಧೀರ್ ಸಂಗ್ವಾನ್ ಹಾಗೂ ಸುಖವಿಂದರ್ ಸಿಂಗ್ ಅವರನ್ನು ಗುರುವಾರ ಸಂಜೆ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News