ಸರಕಾರಗಳ ಪತನಕ್ಕಾಗಿ ಬಿಜೆೆಪಿ 6300 ಕೋಟಿ ರೂ. ಖರ್ಚು ಮಾಡಿದೆ: ಅರವಿಂದ್ ಕೇಜ್ರಿವಾಲ್

Update: 2022-08-27 15:41 GMT
Photo:PTI

ಹೊಸದಿಲ್ಲಿ,ಆ.27: ಕೇಂದ್ರ ಸರಕಾರವು ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಉರುಳಿಸಲು ಶತಾಯಗತಾಯ ಯತ್ನಿಸುತ್ತಿದೆಯೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆಪಾದಿಸಿದ್ದಾರೆ. ಒಂದು ವೇಳೆ ಬಿಜೆಪಿಯು ಇತರ ಸರಕಾರಗ ಪತನಕ್ಕಾಗಿ 6300 ಕೋಟಿ ರೂ.ಗಳನ್ನು ಖರ್ಚು ಮಾಡದೆ ಇದ್ದಲ್ಲಿ ಕೇಂದ್ರ ಸರಕಾರವು ಆಹಾರ ವಸ್ತುಗಳ ಮೇಲೆ ಜಿಎಸ್ಟಿ ತೆರಿಗೆಯನ್ನು ವಿಧಿಸಬೇಕಾದ ಅಗತ್ಯವಿರುತ್ತಿರಲಿಲ್ಲ ಎಂದವರು ಕಟಕಿಯಾಡಿದ್ದಾರೆ.    

ದೇಶದ ಜನತೆ ಬೆಲೆಯೇರಿಕೆಯ ಬಾಧೆಯಿಂದ ಬಳಲುತ್ತಿದ್ದರೆ, ಬಿಜೆಪಿಯು ಇತರ ಪಕ್ಷಗಳ ಶಾಸಕರನ್ನು ಖರೀದಿಸಲು ಹಾಗೂ ರಾಜ್ಯಗಳಲ್ಲಿ ಸರಕಾರಗಳನ್ನು ಉರುಳಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆಯೆಂದು ಅವರು ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ.

ದಿಲ್ಲಿಯ ವಿಧಾನಸಭಾ ಅಧಿವೇಶನದಲ್ಲಿ ಶುಕ್ರವಾರ ಭಾಷಣ ಮಾಡಿದ್ದು ಬಿಜೆಪಿಯು ರಾಜ್ಯ ಸರಕಾರಗಳ ಸರಣಿ ಹಂತಕನೆಂದು ಬಣ್ಣಿಸಿದ್ದರು. ಜಿಎಸ್ಟಿ ಹಾಗೂ ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆಯಿಂದ ಸಂಗ್ರಹವಾದ ಹಣವನ್ನು ಬಿಜೆಪಿ ಸರಕಾರವು ಶಾಸಕರ ಖರೀದಿಗೆ ಬಳಸುತ್ತಿದೆಯೆಂದು ಅವರು ಆಪಾದಿಸಿದ್ದರು.

ಮೊಸರು, ಬೆಣ್ಣೆ, ಜೇನುತುಪ್ಪ,ಗೋಧಿ, ಭತ್ತ ಇತ್ಯಾದಿಗೆ ಕೇಂದ್ರ ಸರಕಾರದ ವಿಧಿಸಿದ ಡಿಎಸ್ಟಿಯಿಂಆಗಿ ವಾರ್ಷಿಕವಾಗಿ 7500 ಕೋಟಿ ರೂ. ಆದಾಯ ದೊರೆಯುತ್ತಿದೆಯೆಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ತಿಳಿಸಿದ್ದಾರೆ.

‘‘ಸರಕಾರಗಳನ್ನು ಉರುಳಿಸಲು ಅವರು ಈವರೆಗೆ 6300 ಕೋಟಿ ರೂ. ಖರ್ಚು ಮಾಡಿದ್ದಾರೆ. ಒಂದು ವೇಳೆ ಅವರು ಸರಕಾರಗಳನ್ನು ಉರುಳಿಸೆ ಇರುತ್ತಿದ್ದಲ್ಲಿ ಗೋಧಿ, ಅಕ್ಕಿ, ಬೆಣ್ಣೆ ಇತ್ಯಾದಿಗಳಿಗೆ ಜಿಎಸ್ಟಿ ವಿಧಿಸಬೇಕಾದ ಅಗತ್ಯವಿರುತ್ತಿರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗುತ್ತಿರಲಿಲ್ಲ’’ ಕೇಜ್ರಿವಾಲ್ ಟ್ವೀಟಿಸಿದ್ದಾರೆ.

ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿ ಅಕ್ರಮಗಳನ್ನು ನಡೆದಿವೆಯೆಂದು ಆರೋಪಿಸಿ ಉಪಮುಖ್ಯಮಂತ್ಲಿ ಮನೀಶ್ ಸಿಸೋಡಿಯಾ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡ ಬಳಿಕ ಎಎಪಿ ಹಾಗೂ ಬಿಜೆಪಿ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.

ಅಬಕಾರಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಆಗಸ್ಟ್ 19ರಂದು ಹೊಸದಿಲ್ಲಿಯಲ್ಲಿರುವ ಸಿಸೋಡಿಯಾ ಅವರ ನಿವಾಸ ಹಾಗೂ ಇತರ 30 ಸ್ಥಳಗಳ ಮೇಲೆ ದಾಳಿ ನಜೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News