ನಿಮ್ಮೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ: ರಮ್ಯಾ ಟ್ವೀಟ್

Update: 2022-08-30 05:21 GMT
ರಮ್ಯಾ 

ಬೆಂಗಳೂರು:  ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Divya Spandana) ಅವರು ಸಿಹಿ ಸುದ್ದಿಯನ್ನು​ ​ಕೊಡುವುದಾಗಿ ಘೋಷಿಸಿದ್ದಾರೆ. 

ಇಂದು (ಮಂಗಳವಾರ) ಟ್ವೀಟ್ ಮಾಡಿರುವ ಅವರು, 'ನಾಳೆ (ಆ.31)  ಬೆಳಗ್ಗೆ 11.15ಕ್ಕೆ ನಾನೊಂದು ಸಿಹಿ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇದು ಅಧಿಕೃತ' ಎಂದು ಪ್ರಕಟಿಸಿದ್ದಾರೆ.

'ನಾನು ಕೈಗೊಳ್ಳಲಿರುವ ನಿರ್ಧಾರದ ಬಗ್ಗೆ ನೀವು ಯೋಚಿಸುವುದಿಲ್ಲವೇ? ' ಎಂದೂ ಅಭಿಮಾನಿಗಳಲ್ಲಿ  ರಮ್ಯಾ ಪ್ರಶ್ನೆ ಮಾಡಿದ್ದಾರೆ. 

ಇನ್ನು ಸದ್ಯ  ರಮ್ಯಾ ಅವರು ರಾಜಕಾರಣದಿಂದ ದೂರ ಉಳಿದಿದ್ದು,  ಸಿನೆಮಾ ರಂಗಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ ಎಂದೂ ಹೇಳಲಾಗುತ್ತಿದ್ದು,  ಅವರ ಟ್ವೀಟ್ ಗೆ ಹಲವರು ಶುಭ ಕೋರಿದ್ದಾರೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಚಿಯಾನ್‌ ವಿಕ್ರಮ್: ʼಕೋಬ್ರಾʼ ಮೂಲಕ ಬಣ್ಣದ ಲೋಕಕ್ಕೆ ಇರ್ಫಾನ್‌ ಪಠಾಣ್ ಪಾದಾರ್ಪಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News