ಜಮ್ಮು-ಕಾಶ್ಮೀರ:ಗುಲಾಂ ನಬಿ ಆಝಾದ್ ಬೆಂಬಲಿಸಿ 60ಕ್ಕೂ ಅಧಿಕ ಕಾಂಗ್ರೆಸ್ ನಾಯಕರ ರಾಜೀನಾಮೆ

Update: 2022-08-30 18:35 GMT

ಹೊಸದಿಲ್ಲಿ,ಆ.30: ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್ ಸೇರಿದಂತೆ ಜಮ್ಮು-ಕಾಶ್ಮೀರದ 60ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ಹಿರಿಯ ರಾಜಕಾರಣಿ ಗುಲಾಂ ನಬಿ ಆಝಾದ್ ಅವರನ್ನು ಬೆಂಬಲಿಸಿ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಆ.26ರಂದು ಕಾಂಗ್ರೆಸ್ನೊಂದಿಗಿನ ತನ್ನ 50 ವರ್ಷಗಳ ಸಂಬಂಧವನ್ನು ಕಡಿದುಕೊಂಡಿದ್ದ ಆಝಾದ್,ತಾನು ಶೀಘ್ರವೇ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಮತ್ತು ಮೊದಲ ಘಟಕವನ್ನು ಜಮ್ಮು-ಕಾಶ್ಮೀರದಲ್ಲಿ ಸ್ಥಾಪಿಸುವುದಾಗಿ ಆ.27ರಂದು ಪ್ರಕಟಿಸಿದ್ದರು.

ಮಂಗಳವಾರ ಜಮ್ಮು ಪ್ರಾಂತ್ಯದ 64 ನಾಯಕರು ಮತ್ತು ಹಿರಿಯ ಪದಾಧಿಕಾರಿಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಜಂಟಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಸೋಮವಾರ ಜಮ್ಮು-ಕಾಶ್ಮೀರ ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಗುಲಾಂ ಹೈದರ್ ಮಲಿಕ್ ಸೇರಿದಂತೆ ನಾಲ್ವರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ವಿದಾಯ ಹೇಳಿದ್ದರು. ದೋಡಾದಲ್ಲಿ ಅಪ್ನಿ ಪಾರ್ಟಿಯ 12 ಕಾರ್ಯಕರ್ತರೂ ರಾಜೀನಾಮೆಯನ್ನು ಸಲ್ಲಿಸಿ ಆಝಾದ್ ಅವರಿಗೆ ಬೆಂಬಲವನ್ನು ಘೋಷಿಸಿದ್ದರು.ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಐವರು ಮಾಜಿ ಶಾಸಕರೂ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News