67ನೇ ಫಿಲ್ಮ್ ಫೇರ್ ಅವಾರ್ಡ್ಸ್: ರಣವೀರ್ ಸಿಂಗ್, ಕೃತಿ ಸನಾನ್‍ಗೆ ಅಗ್ರ ಗೌರವ

Update: 2022-08-31 02:21 GMT
ರಣವೀರ್ ಸಿಂಗ್, ಕೃತಿ ಸನಾನ್‍ (Photo: instagram)

ಮುಂಬೈ: ಚಿತ್ರ ನಿರ್ಮಾಪಕರು, ಬಾಲಿವುಡ್ ತಾರೆಯರು ಮತ್ತು ಚಿತ್ರರಂಗದ ಹಲವು ಕಲಾವಿದರ ಮೇಳೈಕೆಗೆ ಸಾಕ್ಷಿಯಾದ 67ನೇ ವೂಲ್ಫ್777ನ್ಯೂಸ್ ಫಿಲ್ಮ್ ಫೇರ್ ಅವಾರ್ಡ್-2022(67th Wolf777news Filmfare Awards 2022) ಸಮಾರಂಭ ವರ್ಣರಂಜಿತ ಮುಕ್ತಾಯ ಕಂಡಿದ್ದು, ರಣವೀರ್ ಸಿಂಗ್(Ranveer Singh) ಮತ್ತು ಕೃತಿ ಸನಾನ್(Kriti Sanon) ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

'83' ಚಿತ್ರಕ್ಕಾಗಿ ರಣವೀರ್ ಸಿಂಗ್‍ಗೆ ಈ ಗೌರವ ಸಂದಿದ್ದರೆ, 'ಮಿಮಿ' ಚಿತ್ರಕ್ಕಾಗಿ ಕೃತಿ ಗೌರವಕ್ಕೆ ಭಾಜನರಾಗಿದ್ದಾರೆ. ಸರ್ದಾರ್ ಉಧಾಮ್ ಚಿತ್ರಕ್ಕಾಗಿ ವಿಕಿ ಕೌಶಲ್ ವಿಮರ್ಶಕರ ಆಯ್ಕೆ ವಿಭಾಗದಲ್ಲಿ ಅತ್ಯುತ್ತಮ ನಟ ಆಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಶೆರ್ನಿ ಚಿತ್ರದ ಅತ್ಯುತ್ತಮ ನಟನೆಗಾಗಿ ವಿದ್ಯಾ ಬಾಲನ್ ವಿಮರ್ಶಕರು ಮೆಚ್ಚಿದ ಉತ್ತಮ ನಟಿ ಎನಿಸಿಕೊಂಡಿದ್ದಾರೆ.

'ಶೇರ್ ಶಹಾ' ಚಿತ್ರದ ನಿರ್ದೇಶನಕ್ಕಾಗಿ ವಿಷ್ಣುವರ್ಧನ್ ಉತ್ತಮ ನಿರ್ದೇಶಕ ಎಂಬ ಗೌರವಕ್ಕೆ ಪಾತ್ರರಾಗಿದ್ದರೆ, ಜನಪ್ರಿಯ ವಿಭಾಗದಲ್ಲಿ ಇದೇ ಚಿತ್ರ ಉತ್ತಮ ಚಲನಚಿತ್ರವಾಗಿ ಆಯ್ಕೆಯಾಗಿದೆ. ವಿಮರ್ಶಕರ ಆಯ್ಕೆಯ ಉತ್ತಮ ಚಿತ್ರವಾಗಿ ಸರ್ದಾರ್ ಉಧಾಮ್ ಮೂಡಿಬಂದಿದೆ. ಮಿಮಿ ಚಿತ್ರದ ನಟನೆಗಾಗಿ ಪಂಕಜ್ ತ್ರಿಪಾಠಿ ಉತ್ತಮ ಪೋಷಕ ನಟ ಹಾಗೂ ಇದೇ ಚಿತ್ರದಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಸಾಯಿ ಥಮಣ್‍ಕರ್ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಚಂಡೀಗಢ ಕರೆ ಆಶೀಕಿ ಚಿತ್ರಕ್ಕಾಗಿ ಅಭಿಷೇಕ್ ಕಪೂರ್, ಸ್ಫೂರ್ತಿಕ್ ಸೇನ್ ಮತ್ತು ತುಷಾರ್ ಪರಾಂಜಪೆ ಉತ್ತಮ ಕಥೆ ಪ್ರಶಸ್ತಿ ಪಡೆದಿದ್ದಾರೆ. ಸಂದೀಪ್ ಔರ್ ಪಿಂಕಿ ಫರಾರ್ ಚಿತ್ರದ ಉತ್ತಮ ಸಂಭಾಷಣೆಗಾಗಿ ದಿಬಾಕರ್ ಬ್ಯಾನರ್ಜಿ ಮತ್ತು ವರುಣ್ ಗ್ರೋವರ್ ಪ್ರಶಸ್ತಿ ಗೆದ್ದಿದ್ದಾರೆ. ಸರ್ದಾರ್ ಉಧಾಮ್ ಚಿತ್ರಕ್ಕಾಗಿ ಶುಭೇಂದು ಭಟ್ಟಾಚಾರ್ಯ ಮತ್ತು ರಿತೇಶ್ ಶಾ ಉತ್ತಮ ಚಿತ್ರಕಥೆ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಹಾಸನ | ದಲಿತ ವಿದ್ಯಾರ್ಥಿಗೆ ದೇವಸ್ಥಾನ ಪ್ರವೇಶ ನಿರಾಕರಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News