×
Ad

ಕೆಲಸದಲ್ಲಿ ತಪ್ಪುಗಳಾದಾಗ ಮೇಡಂ ನನಗೆ ಥಳಿಸುತ್ತಿದ್ದರು: ಆಸ್ಪತ್ರೆಯಲ್ಲಿರುವ ಬುಡಕಟ್ಟು ಮಹಿಳೆಯ ಆರೋಪ

Update: 2022-08-31 13:26 IST
Photo: Twitter, Indiatoday

ಹೊಸದಿಲ್ಲಿ: ಮನೆಗೆಲಸದ ಮಹಿಳೆಗೆ ಚಿತ್ರಹಿಂಸೆ ನೀಡುತ್ತಿದ್ದ ಆರೋಪದ ಮೇಲೆ ಬಿಜೆಪಿ ನಾಯಕಿ ಸೀಮಾ ಪಾತ್ರಾ (Seema Patra) ಬಂಧನದ ನಂತರ, ಆಕೆಯಿಂದ ಚಿತ್ರಹಿಂಸೆಗೆ ಒಳಗಾದ ಬುಡಕಟ್ಟು ಮಹಿಳೆ(Tribal Women) "ಮೇಡಂ ನಾನು ಕೆಲಸ ಮಾಡುವಾಗ ತಪ್ಪು ಮಾಡಿದಾಗ ನನ್ನನ್ನು ಹೊಡೆಯುತ್ತಿದ್ದರು" ಎಂದು ಹೇಳಿದ್ದಾರೆ. "ನನಗೆ ಗಂಟಲಿನ ಸಮಸ್ಯೆ ಇದೆ. ನೀವು ಕೇಳಿದಂತೆಯೇ ಎಲ್ಲವೂ ನನಗೆ ಸಂಭವಿಸಿದೆ." ಎಂದು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ ಎಂದು indiatoday ವರದಿ ಮಾಡಿದೆ. 

ಅಮಾನತುಗೊಂಡಿರುವ ಬಿಜೆಪಿ ನಾಯಕಿ ಸೀಮಾ ಪಾತ್ರ ಅವರನ್ನು ರಾಂಚಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.

ಪೊಲೀಸ್ ಬಂಧನಕ್ಕೆ ಹೆದರಿ ಸೀಮಾ ಪತ್ರಾ ಪರಾರಿಯಾಗಿದ್ದು, ರಾಂಚಿಯ ಅರ್ಗೋರಾ ಪೊಲೀಸರು ಆಕೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ ಸುನೀತಾಳನ್ನು ನಾಲಿಗೆಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮಾಡಲಾಗಿತ್ತು.

ಸುನೀತಾ ಅವರ ದೇಹದಾದ್ಯಂತ ಅನೇಕ ಗಾಯಗಳಾಗಿವೆ. ಸೀಮಾ ಪಾತ್ರಾ ತನ್ನನ್ನು ಬಿಸಿ ವಸ್ತುಗಳಿಂದ ಸುಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರಾ ಅವರ ಪತ್ನಿ ಪತ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆ, 1989 ರ ಸೆಕ್ಷನ್‌ಗಳ ಅಡಿಯಲ್ಲಿ ರಾಂಚಿಯ ಅರ್ಗೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸೆಕ್ಷನ್ 164ರ ಅಡಿಯಲ್ಲಿ ಸುನೀತಾ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿದೆ. ಜಾರ್ಖಂಡ್ ಬಿಜೆಪಿಯು ಸೀಮಾ ಪಾತ್ರಾಳನ್ನು ಈ ಆರೋಪಗಳು ಕೇಳಿ ಬಂದ ಬಳಿಕ ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News