ಕಾರ್ಕಳ: ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಂಜೀವ ದೇವಾಡಿಗ ಆಯ್ಕೆ
Update: 2022-09-03 14:05 IST
ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರು ಇಲ್ಲಿನ ಮುಖ್ಯ ಶಿಕ್ಷಕ, ಕಾರ್ಕಳ ತೆಳ್ಳಾರು ನಿವಾಸಿ ಸಂಜೀವ ದೇವಾಡಿಗ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಕೆರ್ವಾಶೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯಲ್ಲಿ 8 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಸಂದರ್ಭ ಶಾಲಾ ಹಾಗೂ ಶೈಕ್ಷಣಿಕ ಅಭಿವೃದ್ದಿ, ಕೊರೊನಾ ಸಂದರ್ಭದಲ್ಲಿ ವಿನೂತನ ಪರಿಕಲ್ಪನೆಯ ಅಕ್ಕನ ಮನೆಪಾಠ ಯೋಜನೆ ಅನುಷ್ಠಾನಗೊಳಿಸಿದ್ದರು. ಸಂಜೀವ ದೇವಾಡಿಗ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸರಕಾರ ಪ್ರಶಸ್ತಿ ಘೋಷಿಸಿದೆ.
ಇದನ್ನೂ ಓದಿ: 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?