ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
ಮಂಗಳೂರು, ಸೆ.3: ಪ್ರಸಕ್ತ (2022-23ನೆ) ಶೈಕ್ಷಣಿಕ ವರ್ಷದ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ 7 ಶೈಕ್ಷಣಿಕ ವಲಯಗಳಿದ್ದು, ಪ್ರತಿಯೊಂದು ವಲಯದ ತಲಾ ಮೂವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಸೆ.5ರಂದು ಪುತ್ತೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ಉತ್ತರ ವಲಯ: ಕೆಂಜಾರಿನ ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ರೋಸ್‌ಲೀನ್ ಆರ್.ಎಸ್., ಮರಕಡದ ಹಿ. ಪ್ರಾ. ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕಿ ನೇತ್ರಾವತಿ ಎ, ಡೊಂಗರಕೇರಿಯ ಅನುದಾನಿತ ಕೆನರಾ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸಹ ಶಿಕ್ಷಕಿ ರಾಜೇಶ್ವರಿ ಕೆ..
ಮಂಗಳೂರು ದಕ್ಷಿಣ ವಲಯ: ಪಾವೂರಿನ ಸರಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಅಬ್ದುಲ್ ಮಜೀದ್ ಎಂ, ಬಗಂಬಿಲದ ಸರಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ವಸಂತ ರೈ ಬಿ.ಕೆ., ಪದುವಾ ಅನುದಾನಿತ ಪ್ರೌಢ ಶಾಲೆಯ ಸಹ ಶಿಕ್ಷಕ ಸ್ಟೇನಿ ಗೇಬ್ರಿಯಲ್ ತಾವ್ರೊ.
ಮೂಡುಬಿದಿರೆ ವಲಯ: ಕಂಚರ್ಲಗುಡ್ಡದ ಸರಕಾರಿ ಕಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸುಜಾತಾ, ಮೂಡಮಾರ್ನಾಡು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಡಿಸೋಜ, ಅಳಿಯೂರು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸುಬ್ರಹ್ಮಣ್ಯ ವಿ.
ಪುತ್ತೂರು ವಲಯ: ಮೀನಡಿ ಸರಕಾರಿ ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಗೋವಿಂದ ನಾಯ್ಕ ಬಿ., ಪಾಪೆಮಜಲು ಸರಕಾರಿ ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ತೆರೇಜ್ ಎಂ.ಸಿಕ್ವೇರಾ, ಸರ್ವೆಯ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ.
ಸುಳ್ಯ ವಲಯ: ಕೇನ್ಯ ಸರಕಾರಿ ಕಿ.ಪ್ರಾ.ಶಾಲೆಯ ಸಹ ಶಿಕ್ಷಕಿ ರೇವತಿ ಕೊಡಪಾಡಿ, ಬೆಳ್ಳಾರೆ ಕೆಪಿಎಸ್ ಹಿ.ಪ್ರಾ.ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕ ಮಾಯಿಲ ಮೇರ ಯಾನೆ ಜಿ. ಮಾಯಿಲಪ್ಪ, ಪಂಜ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಸಿ.
ಬಂಟ್ವಾಳ ವಲಯ: ನೆಟ್ಲ ಸರಕಾರಿ ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಪ್ರವೀಣ್ ಬಿ., ಮೂಡುಪಡುಕೋಡಿ ಸರಕಾರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಸುನಿಲ್ ಸಿಕ್ವೇರಾ, ಸಾಲೆತ್ತೂರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ.
ಬೆಳ್ತಂಗಡಿ ವಲಯ: ನೆಕ್ಕಿಲ್ ಸರಕಾರಿ ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಬಸನಗೌಡ ಎಸ್. ಬಿರಾದಾರ, ಗುತ್ಯಡ್ಕ ಎಳನೀರು ಸರಕಾರಿ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರವೀಂದ್ರ ಡಿ.ಎನ್., ಕೊಯ್ಯೂರು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ರಾಮಚಂದ್ರ ದೊಡಮನಿ.