ಬಿಬಿಎ ಪರೀಕ್ಷೆಯ ಗೊಂದಲ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
Update: 2022-09-05 18:02 IST
ಉಡುಪಿ, ಸೆ.5: ಮಂಗಳೂರು ವಿವಿ ಬಿಬಿಎ ಪದವಿ ವಿದ್ಯಾರ್ಥಿಗಳ ದ್ವೀತಿಯ ಸೇಮಿಸ್ಟರ್ ಕನ್ನಡ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದ ಪರೀಕ್ಷೆ ಯನ್ನು ರದ್ದುಪಡಿಸಿ ಮುಂದೂಡಲಾಗಿದೆ. ಈ ಬೆಳವಣಿಗೆಯಿಂದ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬೇರೆಯದೇ ನಿರಾಸೆ ಯಿಂದ ಮನೆಗೆ ಹಿಂತಿರುಗಿ ಹೋಗಿದ್ದಾರೆ ಎಂದು ಎಸ್‌ಐಓ ಉಡುಪಿ ತಿಳಿಸಿದೆ.
ಬಹುತೇಕ ವಿದ್ಯಾರ್ಥಿಗಳಲ್ಲಿ ಇದರಿಂದ ಆತ್ಮವಿಶ್ವಾಸ ಕುಂದುಹೋಗಿದ್ದು, ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟ ವಾಡುತ್ತಿರುವ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಪರೀಕ್ಷಾ ವಿಭಾಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿವಿಯ ಬೇಜವಾಬ್ದಾರಿಯುತ ಕಾರ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು, ಈ ಅವಾಂತರಕ್ಕೆ ಕಾರಣವಾದವರನ್ನು ತಕ್ಷಣವೇ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಈ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕೆಂದು ಎಸ್‌ಐಓ ಉಡುಪಿ ಆಗ್ರಹಿಸಿದೆ.