×
Ad

ದೇಶ ಒಡೆಯುವುದನ್ನು ನಿಲ್ಲಿಸಲು ಸರಕಾರ ಇನ್ನಷ್ಟು ಮಾಡಬೇಕಿದೆ ಎಂದ ಗೋದ್ರೇಜ್ ಸಂಸ್ಥೆ ಅಧ್ಯಕ್ಷ

Update: 2022-09-05 20:51 IST
ಗೋದ್ರೇಜ್ ಸಂಸ್ಥೆ ಅಧ್ಯಕ್ಷ ನಾದಿರ್ ಗೋದ್ರೇಜ್ (Photo: Twitter/@ncbn)

ಹೊಸದಿಲ್ಲಿ: ದೇಶವನ್ನು ಒಡೆಯುವುದನ್ನು ನಿಲ್ಲಿಸಬೇಕು ಹಾಗೂ ಈ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ಮಾಡಬೇಕಿದೆ ಎಂದು ಗೋದ್ರೇಜ್ ಇಂಡಸ್ಟ್ರೀಸ್ ಅಧ್ಯಕ್ಷ ನಾದಿರ್ ಗೋದ್ರೇಜ್(Nadir Godrej) ಹೇಳಿದ್ದಾರೆ. ಇಂತಹ ಮಾತುಗಳು ದೇಶದ ಗಣ್ಯ ಕೈಗಾರಿಕೋದ್ಯಮಿಗಳಿಂದ ಬಹಳ ಅಪರೂಪವಾಗಿರುವಂತಹ ಸಂದರ್ಭದಲ್ಲಿ ನಾದಿರ್ ಗೋದ್ರೇಜ್ ಅವರ ಹೇಳಿಕೆ ಬಹಳಷ್ಟು ಮಹತ್ವ ಪಡೆದಿದೆ ಎಂದು thewire.in ವರದಿ ಮಾಡಿದೆ.

"ಆರ್ಥಿಕ ಕ್ಷೇತ್ರದಲ್ಲಿ ದೇಶ ಚೆನ್ನಾಗಿ ಮಾಡುತ್ತಿದೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆಯಾದರೂ ದೇಶದ ಏಕತೆಗೆ ಶ್ರಮಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕಿದೆ,'' ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೋದ್ರೆಜ್ ಹೇಳಿದರು.

ದೇಶದ ಕೈಗಾರಿಕೆಗಳೂ ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಮತ್ತು ಸರಕಾರ ಇನ್ನಷ್ಟು ಮಾಡಬೇಕಿದೆ ಎಂದು ಅವರು ಹೇಳಿದರು.

ಫ್ರೀಬೀಸ್ ವಿಚಾರ ಪ್ರಸ್ತಾಪಿಸಿದ ಅವರು ಈ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಕ್ಕೆ ಸುಪ್ರೀಂ ಕೋರ್ಟಿನ ಒಲವನ್ನು ಶ್ಲಾಘಿಸಿದರು. ಸರಕಾರವು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ  ಹೆಚ್ಚು ಖರ್ಚು ಮಾಡಬೇಕು, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಹೂಡಿಕೆಗಳು ಪ್ರತಿಫಲ ನೀಡುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಸಂಜೀವ್‌ ಭಟ್‌ ಬಂಧನವಾಗಿ ನಾಲ್ಕು ವರ್ಷ: ಪತ್ನಿ ಶ್ವೇತಾ ಭಟ್‌ ಭಾವನಾತ್ಮಕ ಪತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News