ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರ ಅನುಮತಿ ನೀಡಿತ್ತು: ಅಪರಾಧಿಗಳ ಪರ ವಕೀಲ

Update: 2022-09-06 06:20 GMT

ಹೊಸದಿಲ್ಲಿ: ಗುಜರಾತ್ ನಲ್ಲಿ 2002ರಲ್ಲಿ ನಡೆದ  ಬಿಲ್ಕಿಸ್ ಬಾನು(Bilkis Bano) ಮೇಲಿನ ಅತ್ಯಾಚಾರ ಹಾಗೂ 14 ಜನರ ಹತ್ಯೆ ಪ್ರಕರಣದ 11 ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರಕಾರ ಅನುಮತಿ ನೀಡಿತ್ತು ಎಂದು ಅಪರಾಧಿಗಳ ಪರ ವಕೀಲರು ಹೇಳಿದ್ದಾರೆ.

ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರಕಾರ ಅನುಮತಿ ನೀಡಿತ್ತು ಎಂಬ ವಿಚಾರವನ್ನು ಪತ್ರಕರ್ತೆ ಮತ್ತು ಬರಹಗಾರ್ತಿ ಬರ್ಖಾ ದತ್ ನೇತೃತ್ವದ ಮಾಧ್ಯಮ ಸಂಸ್ಥೆ Mojo Storyಗೆ ಅಪರಾಧಿಗಳ ಪರ ವಕೀಲ ರಿಷಿ ಮಲ್ಹೋತ್ರಾ ಖಚಿತಪಡಿಸಿದ್ದಾರೆ. ಈ ವೇಳೆ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ಸುಭಾಶಿನಿ ಅಲಿ ಕೂಡ ಇದ್ದರು.

ಗುಜರಾತ್ ಸರಕಾರವು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ 11 ಅಪರಾಧಿಗಳನ್ನು ಸನ್ನಡೆತಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News