ಕಾರಿನ ಹಿಂಬದಿ ಸೀಟಿನ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುವುದು: ನಿತಿನ್ ಗಡ್ಕರಿ

Update: 2022-09-06 17:20 GMT
ನಿತಿನ್ ಗಡ್ಕರಿ (PTI)

ಹೊಸದಿಲ್ಲಿ: ಕಾರಿನ ಹಿಂಬದಿಯಲ್ಲಿ ಕುಳಿತು ಸೀಟ್ ಬೆಲ್ಟ್ ಧರಿಸದವರಿಗೆ ಶೀಘ್ರದಲ್ಲೇ ದಂಡ ವಿಧಿಸಲಾಗುವುದು ಎಂದು ಮಂಗಳವಾರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿದ್ದಾರೆ. ಮುಂಬೈ ಬಳಿ ಕಾರು ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ (Cyrus Mistry) ಸಾವನ್ನಪ್ಪಿದ ಎರಡು ದಿನಗಳ ನಂತರ ಈ ಘೋಷಣೆ ಹೊರಬಂದಿದೆ.

"ಈಗಾಗಲೇ, ಹಿಂದಿನ ಸೀಟಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ, ಹಿಂದಿನ ಸೀಟಿನಲ್ಲಿರುವವರು ಸೀಟ್ ಬೆಲ್ಟ್ ಧರಿಸದಿದ್ದರೆ ಇನ್ನು ಮುಂದೆ ದಂಡ ವಿಧಿಸಲಾಗುತ್ತದೆ," ಎಂದು ಗಡ್ಕರಿ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.

ದಂಡವನ್ನು ಸಂಗ್ರಹಿಸುವುದು ನಮ್ಮ ಉದ್ದೇಶವಲ್ಲ ಆದರೆ, ಹಿಂದೆ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ಇದು ಅಗತ್ಯ ಇದೆ ಎಂದು  ಗಡ್ಕರಿ ಹೇಳಿದರು.  2024 ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಇದೆ ಎಂದು ಅವರು ಹೇಳಿದರು.

 "ಕನಿಷ್ಠ ದಂಡ ₹ 1,000 ವಿಧಿಸಲಾಗುವುದು" ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News