×
Ad

ಬಾಂಗ್ಲಾ 25 ವರ್ಷಗಳ ಬಳಿಕ ಭಾರತ-ಬಾಂಗ್ಲಾ ನಡುವೆ ನದಿ ನೀರು ಹಂಚಿಕೆ ಒಪ್ಪಂದ

Update: 2022-09-06 22:44 IST

ಹೊಸದಿಲ್ಲಿ :ಖುಶಿಯಾರಾ ನದಿ ನೀರಿನ ಹಂಚಿಕೆ ಕುರಿತ ಮಧ್ಯಂತರ ಒಪ್ಪಂದಕ್ಕೆ ಭಾರತ ಹಾಗೂ ಬಾಂಗ್ಲಾ ಮಂಗಳವಾರ ಸಹಿಹಾಕವೆ. 1996ರಲ್ಲಿ ಏರ್ಪಟ್ಟ ಗಂಗಾ ನದಿ ನೀರಿನ ಒಪ್ಪಂದದ ಆನಂತರ ಉಭಯದೇಶಗಳ ನಡುವೆ ಇಂತಹ ಒಪ್ಪಂದ ಏರ್ಪಟ್ಟಿರುವುದು ಇದೇ ಮೊದಲ ಸಲವಾಗಿದೆ.

  ಗಡಿಯಾಚೆಗಿನ ಕುಶಿಯಾರಾ ನದಿಯಿಂದ ನೀರನ್ನು ಪಡೆದುಕೊಳ್ಳುವುದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಕಾರ,ಸರಕುಗಳ ಸಾಗಣೆಯಂತಹ ಕ್ಷೇತ್ರಗಳಲ್ಲಿ ರೈಲ್ವೆಯಿಂದ ಮಾಹಿತಿತಂತ್ರಜ್ಞಾನ ವ್ಯವಸ್ಥೆಯ ಬಳಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಹಕಾರ, ಬಾಂಗ್ಲಾದೇಶದ ರೈಲ್ವೆ ಸಿಬ್ಬಂದಿ ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ ಮತ್ತು ಪ್ರಸಾರಭಾರತಿ ಹಾಗೂ ಬಾಂಗ್ಲಾದೇಶ ಟೆಲಿವಿಶನ್ ನಡುವೆ ಪ್ರಸಾರ ಒಪ್ಪಂದ ಸೇರಿದಂತೆ ಎರಡೂ ದೇಶಗಳು ಏಳು ತಿಳುವಳಿಕಾ ಒಪ್ಪಂದ (ಎಂಓಯು)ಗಳಿಗೆ ಸಹಿಹಾಕಿದವು.

  ಉಭಯದೇಶಗಳು 54 ನದಿಗಳನ್ನು ಹಂಚಿಕೊಂಡಿರುವುದನ್ನು ಮಾತುಕತೆಯ ವೇಳೆ ಬೆಟ್ಟು ಮಾಡಿದ ಪ್ರಧಾನಿ ಮೋದಿ ಹಾಗೂ ಹಸೀನಾ, ಈ ನದಿಗಳು ಶತಮಾನಗಳು ಇಕ್ಕಡೆಗಳ ಜನರ ಜೀವನೋಪಾಯಗಳ ಜೊತೆ ಬೆಸೆದುಕೊಂಡಿದೆಯೆಂದು ಹೇಳಿದರ.ಉ

ಕುಶಿಯಾರಾ ನದಿಯ ನೀರಿನ ಹಂಚಿಕೆಯ ಒಪ್ಪಂದವು ಭಾರತದಲ್ಲಿ ದಕ್ಷಿಣ ಅಸ್ಲಾಂ ಹಾಗೂ ಬಾಂಗ್ಲಾದೇಶದ ಸಿಲ್‌ಹೆಟ್ ಪ್ರಾಂತದ ಜನರಿಗೆ ಪ್ರಯೋಜನವಾಗಲಿದೆಯೆಂು ಮೋದಿ ತಿಳಿಸರು.

    ಇದೇ ವೇಳೆ ಭಾರತದ ರಿಯಾಯಿತಿ ದರದ ಆರ್ಥಿಕ ನೆರವಿನೊಂದಿಗೆ ಖುಲ್ನಾ ವಿಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೈತ್ರಿ ಉಷ್ಣ ವಿದ್ಯುತ್ ಯೋಜನೆಯ ಪ್ರಥಮ ಘಟಕವನ್ನು ಅನಾವರಣಗೊಳಿಸಿದರು. ಈ ಘಟಕನ್ನು ಭಾರತದ ಪವರ್‌ಗ್ರಿಡ್ ಜೊತೆ ಸಮ್ಮಿಳಿತಗೊಳಿಸಲಾಗಿತ್ತು ಮತ್ತು ಈ ಯೋಜನೆಯು ಪೂರ್ಣಗೊಂಡಾಗ 1320 ಮೆಗಾವ್ಯಾಟ್ ವಿದ್ಯುತ್ತನ್ನು ಸೃಷ್ಟಿಸಲಿದೆ.

 64.7ಕಿ.ಮೀ. ವಿಸ್ತೀರ್ಣದ ಖುಲ್ನಾ-ಮೊಂಗ್ಲಾ ಬಂದರು ಬ್ರಾಡ್‌ಗೇಜ್ ರೈಲು ಯೋಜನೆಯ ಭಾಗವಗಾಇ 5.13 ಇ.ಮೀ. ವಿಸ್ತೀರ್ಣದ ರುಷ್ಪಾ ರೈಲು ಸೇತುವೆಯನ್ನು ಕೂಡಾ ಉಭಯ ಮುಖಂಡರು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News