ಜಮ್ಮುವಿನ ಅರ್ನಿಯ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ: ಬಿಎಸ್‌ಎಫ್

Update: 2022-09-06 18:47 GMT

ಹೊಸದಿಲ್ಲಿ, ಸೆ. 6: ಜಮ್ಮುವಿನ ಅರ್ನಿಯಾ ವಲಯದಲ್ಲಿ ಪಾಕಿಸ್ತಾನ ಸೇನಾ ಪಡೆ ಮಂಗಳವಾರ ಕದನ ವಿರಾಮ ಉಲ್ಲಂಘಿಸಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರ ಹೇಳಿದ್ದಾರೆ.  ಗಸ್ತು ತಂಡದ ಮೇಲೆ ಪಾಕಿಸ್ತಾನ ಸೇನಾ ಪಡೆ ಗುಂಡು ಹಾರಿಸಿದ ಬಳಿಕ ಗಡಿ ಭದ್ರತಾ ಪಡೆಯ ಜಮ್ಮು ಘಟಕದ ತಂಡ ಪ್ರತಿ ದಾಳಿ ನಡೆಸಿತು. ಆದರೆ, ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ವಕ್ತಾರರು  ತಿಳಿಸಿದ್ದಾರೆ. 

ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮಕ್ಕೆ ಭಾರತ ಹಾಗೂ ಪಾಕಿಸ್ತಾನ ಕಳೆದ ವರ್ಷ ಫೆಬ್ರವರಿಯಲ್ಲಿ ಒಪ್ಪಿಕೊಂಡ ಬಳಿಕ ಗಡಿಯಾಚೆಯಿಂದ ಗುಂಡಿನ ದಾಳಿ ನಡೆಯುತ್ತಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News