×
Ad

ರಾಜಪಥಕ್ಕೆ 'ಕರ್ತವ್ಯ ಪಥ' ಎಂದು ಮರುನಾಮಕರಣ

Update: 2022-09-07 18:05 IST
Photo: PTI

 ಹೊಸದಿಲ್ಲಿ,ಸೆ.7: ದಿಲ್ಲಿಯ ರಾಜಪಥವನ್ನು ‘ಕರ್ತವ್ಯಪಥ’ ಎಂಬುದಾಗಿ ಮರುನಾಮಕರಣಗೊಳಿಸಲಾಗಿದೆಯೆಂದು ಕೇಂದ್ರ ವಿದೇಶಾಂಗ ವ್ಯವಹಾರ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ಸಚಿವೆ ಮೀನಾಕ್ಷಿ ಲೇಖಿ ಬುಧವಾರ ಘೋಷಿಸಿದ್ದಾರೆ.

ಹೊಸದಿಲ್ಲಿಯ ಇಂಡಿಯಾಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ಪ್ರಧಾನ ರಸ್ತೆಯನ್ನು ರಾಜಪಥ ಎಂದು ಕರೆಯಲಾಗುತ್ತದೆ.

   ರಾಜಪಥ ಎಂಬ ಹೆಸರು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯೆಂು ಲೇಖಿ ತಿಳಿಸಿದರು ‘‘ ದೇಶವು ಅಝಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ವಸಾಹತುಶಾಹಿ ನೀತಿಗಳನ್ನು ಹಾಗೂ ಸಂಕೇತಗಳನ್ನು ಕೊನೆಗೊಳಿಸಬೇಕಾಗಿದೆಯೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹೀಗಾಗಿ ರಾಜಪಥದ ಹೆಸರನ್ನು ಕರ್ತವ್ಯಪಥವೆಂದು ಬದಲಾಯಿಸಲಾಗಿದೆಂದು ಹೊಸದಿಲ್ಲಿ ಮುನ್ಸಿಪಲ್ ಮಂಡಳಿಯ ಸದಸ್ಯೆಯೂ ಆಗಿರುವ ಲೇಖಿ ಹೇಳಿದ್ದಾರೆ.

 ರಾಜಪಥ ರಸ್ತೆಯನ್ನು ಪುನರ್‌ನಾಮಕರಣಗೊಳಿಸುವ ಬಗ್ಗೆ ಕೇಂದ್ರ ಗೃಹ ಹಾಗೂ ನಾಗರಿಕ ವ್ಯವಹಾರಗಳ ಸಚಿವಾಲಯದಿಂದ ತನಗೆ ಪ್ರಸ್ತಾವನೆ ಬಂದಿರುವುದಾಗಿ ಹೊಸದಿಲ್ಲಿ ಮುನ್ಸಿಪಲ್ ಮಂಡಳಿಯ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದ್ದಾರೆ.

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅಧಿಕಾರಕ್ಕೇರಿದ ಒಂದು ವರ್ಷದ ಬಳಿಕ , 2015ರಲ್ಲಿ ಪ್ರಧಾನಿಯವರ ಅಧಿಕೃತ ನಿವಾಸವಿರುವ ರೇಸ್‌ಕೋರ್ಸ್ ರಸ್ತೆಯ ಹೆಸರನ್ನು ಲೋಕಕಲ್ಯಾಣ ಮಾರ್ಗ್ ಎಂಬುದಾಗಿ ಹೆಸರಿಸಲಾಗಿದೆ. ಆ ವರ್ಷವೇ ರಾಜಧಾನಿಯಲ್ಲಿರುವ ಔರಂಗಜೇಬ್ ರಸ್ತೆಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆಯೆಂಬುದಾಗಿ ಪುನರ್‌ನಾಮಕರಣಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News