ಎಐಎಡಿಎಂಕೆ ಸಂಪರ್ಕದಲ್ಲಿ ಡಿಎಂಕೆಯ 10 ಶಾಸಕರು: ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ
ಚೆನ್ನೈ: ಆಡಳಿತ ಪಕ್ಷ ಡಿಎಂಕೆಯ(DMK) 10 ಶಾಸಕರು ಎಐಎಡಿಎಂಕೆ (AIADMK) ಪಕ್ಷದ ಸಂಪರ್ಕದಲ್ಲಿದ್ದಾರೆಂದು ವಿಧಾನಸಭೆ ಪ್ರತಿಪಕ್ಷ ನಾಯಕ, ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ (Edappadi K Palaniswami) ಹೇಳಿದ್ದಾರೆ .
ಎಐಎಡಿಎಂಕೆಯ ಹಿರಿಯ ಮುಖಂಡರು ಶೀಘ್ರದಲ್ಲೇ ಡಿಎಂಕೆ ಪಕ್ಷವನ್ನು ಸೇರಲಿದ್ದಾರೆ ಎಂದು ಡಿಎಂಕೆ ಸಂಸದ ಡಿಎನ್‌ವಿ ಎಸ್. ಸೆಂಥಿಲ್‌ಕುಮಾರ್ ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಪಳನಿಸ್ವಾಮಿ, ಡಿಎಂಕೆ ಪಕ್ಷದ10 ಶಾಸಕರು ನಮ್ಮ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದವರು ಡಿಎಂಕೆ ಸೇರ್ಪಡೆಗೊಳ್ಳುತ್ತಿರುವ ವಿಚಾರ ಸುಳ್ಳು ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಪಳನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಎಂಕೆ ವಕ್ತಾರ ಆರ್.ಎಸ್. ಭಾರತಿ, ಎಐಎಡಿಎಂಕೆಯ 50 ಶಾಸಕರು ತಮ್ಮ ಪಕ್ಷದ ಜೊತೆ ಸಂಪರ್ಕದಲ್ಲಿದ್ದು, ಪಕ್ಷಾಂತರ ಮಾಡಲು ಸಿದ್ಧರಾಗಿದ್ದಾರೆ ಎಂದಿದ್ದಾರೆ. ಪಳನಿಸ್ವಾಮಿ ಎಐಎಡಿಎಂಕೆ ಜೊತೆ ಸಂಪರ್ಕದಲ್ಲಿರುವ ಡಿಎಂಕೆ ಶಾಸಕರ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲಿ, ನಂತರ ನಮ್ಮ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಆರೋಪಿಯ ಹೆಸರು ತಿರುಚಿ ಕೊಲೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು !