ಪ್ರಧಾನಿಯಿಂದ ಸೆಂಟ್ರಲ್ ವಿಸ್ಟಾ ಅವೆನ್ಯೂ, ನೇತಾಜಿ ಪ್ರತಿಮೆ ಉದ್ಘಾಟನೆ

Update: 2022-09-08 18:04 GMT

ಹೊಸದಿಲ್ಲಿ, ಸೆ. 8: ಈ ಹಿಂದೆ ‘ರಾಜಪಥ’ ಎಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಸಾಗುವ ರಸ್ತೆ ‘ಕರ್ತವ್ಯ ಪಥ’ವನ್ನು ಗುರುವಾರ ನಡೆದ ಭವ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಸಂದರ್ಭ ಅಬಿವೃದ್ಧಿ ಯೋಜನೆಯಲ್ಲಿ ಪಾಲ್ಗೊಂಡ ಶ್ರಮಜೀವಿ (ಕಾರ್ಮಿಕರು)ಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ, ‘‘ಅವರು ನಿರ್ಮಾ ಮಾಡಿರುವುದು ಮಾತ್ರ ಅಲ್ಲ. ಬದಲಾಗಿ ಅವರು ಕರ್ತವ್ಯವನ್ನು ಇನ್ನೊಂದು ರೀತಿಯಲ್ಲಿ ಪ್ರದರ್ಶಿಸಿದ್ದಾರೆ’’ ಎಂದರು.

‘‘ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಶ್ರಮ ಜೀವಿಗಳು ಜನವರಿ 26ರ ಗಣರಾಜ್ಯೋತ್ಸವದಲ್ಲಿ ನನ್ನ ವಿಶೇಷ ಅತಿಥಿಗಳಾಗಲಿದ್ದಾರೆ’’ ಎಂದು ಅವರು ಹೇಳಿದರು.  ಇದಲ್ಲದೆ, ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾಗಿರುವ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು ಹಾಗೂ ಪುಷ್ಪ ನಮನ ಸಲ್ಲಿಸಿದರು.

ಅನಂತರ ಮಾತನಾಡಿದರ ಅವರು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಕೊಡುಗೆಯನ್ನು ಸ್ಮರಿಸಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವರಿಗೆ ಸರಿಯಾದ ಗೌರವ ಸಿಕ್ಕಿಲ್ಲ ಎಂದು  ಹೇಳಿದರು.  
ಸ್ವಾತಂತ್ರ್ಯದ ಬಳಿಕ ನಮ್ಮ ದೇಶ ಸುಭಾಷ್ ಚಂದ್ರ ಭೋಸ್ ಅವರ ಪಥವನ್ನು ಅನುಸರಿಸಿದ್ದರೆ, ಭಾರತ ಇಂದು ಎಷ್ಟೋ ಎತ್ತರಕ್ಕೆ ಏರಿರುತ್ತಿತ್ತು. ಆದರೆ, ದುರಾದೃಷ್ಟವೆಂದರೆ ಸ್ವಾತಂತ್ರ್ಯದ ಬಳಿಕ ನಮ್ಮ ಮಹಾನ್ ನಾಯಕನನ್ನು ಮರೆತಿದ್ದೇವೆ ಎಂದು ಪ್ರಧಾನಿ ಅವರು ನುಡಿದರು. 
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜಿ. ಕೃಷ್ಣ ರೆಡ್ಡಿ, ಅರ್ಜುನ್ ಮೇಘಾವಲ್, ಮೀನಾಕ್ಷಿ ಲೇಖಿ ಹಾಗೂ ಕೌಶಲ್ ಕಿಶೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News