ರಾಹುಲ್ ಗಾಂಧಿಯನ್ನು ಅಣಕಿಸಿದ ಹಿಮಂತ ಬಿಸ್ವಾ ವೀಡಿಯೊ ಪೋಸ್ಟ್ ಗೆ ಕಾಂಗ್ರೆಸ್ ತಿರುಗೇಟು

Update: 2022-09-10 07:25 GMT

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ( Assam Chief Minister Himanta Biswa Sarma)ಅವರು ರಾಹುಲ್ ಗಾಂಧಿಯನ್ನು ಅಣಕವಾಡಿದ ವೀಡಿಯೊವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ ರಾಹುಲ್ ಗಾಂಧಿಯವರನ್ನು   ಹೊಗಳಿರುವ ಶರ್ಮಾ ಅವರ 12 ವರ್ಷಗಳ ಹಿಂದಿನ ಟ್ವೀಟ್ ಅನ್ನು ಹಾಕಿ ತಿರುಗೇಟು ನೀಡಿದೆ.

ಶರ್ಮಾ ಅವರು ಕಾಂಗ್ರೆಸ್‌ನಲ್ಲಿ ಸಂದರ್ಭದಲ್ಲಿ  ಮಾಡಿದ ಟ್ವೀಟ್‌ನಲ್ಲಿ ರಾಹುಲ್  ಗಾಂಧಿಯವರು "ಸೂಕ್ತ ಸಮಯದಲ್ಲಿ ನಮ್ಮ ದೇಶದ ಪ್ರಧಾನಿಯಾಗುತ್ತಾರೆ" ಎಂದು ಭವಿಷ್ಯ ನುಡಿದಿದ್ದರು.

ಕಾಂಗ್ರೆಸ್  ಪಕ್ಷದ ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ ಯಾತ್ರೆ' ಕುರಿತು ಟೀಕಿಸಿರುವ  ಬಿಜೆಪಿಯ ಹಿರಿಯ ನಾಯಕ ಶರ್ಮಾಗೆ ಅವರು ಈ ಹಿಂದೆ ಮಾಡಿದ ಟ್ವೀಟ್ ತಿರುಗುಬಾಣವಾಗಿದೆ.

ಶರ್ಮಾ ಅವರ ಇತ್ತೀಚಿನ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿಯನ್ನು ಅಣಕಿಸಿರುವ ಹಾಗೂ 2010 ರ ಪೋಸ್ಟ್‌ನಲ್ಲಿ ರಾಹುಲ್ ರನ್ನು ಹೊಗಳಿರುವ ಎರಡು ಚಿತ್ರವನ್ನು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಅವರು  ಹಂಚಿಕೊಂಡಿದ್ದಾರೆ.

 "ಆತ್ಮೀಯ @narendramodi ji ಯವರೇ @himantabiswa ಯಾರಿಗೆ ವಂಚನೆ ಮಾಡುತ್ತಿದ್ದಾರೆ? ಅವರ ಬಗ್ಗೆ ಎಚ್ಚರಯಿಂದಿರಿ ಎಂದು ಅವರ ಟ್ರ್ಯಾಕ್ಡ್ ರೆಕಾರ್ಡ್ ಹೇಳುತ್ತಿದೆ... ನೀವು ಅವರಿಗೆ ಮೋಸ ಮಾಡಲು ಬಿಡುವುದಿಲ್ಲ ಎಂದು ನನಗೆ ತಿಳಿದಿದೆ" ಎಂದು ಮಾಣಿಕ್ಕಂ ಟ್ಯಾಗೋರ್ ಟ್ವೀಟಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಶುಕ್ರವಾರ ರಾಹುಲ್ ಗಾಂಧಿಯವರ ವಿಡಂಬನೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.  ಅವರನ್ನು ತಮಾಷೆಯ ಜಿಂಗಲ್‌ಗಳನ್ನು ಹಾಡುವ ಕಾರ್ಟೂನ್ ಪಾತ್ರದಂತೆ ಚಿತ್ರಿಸಿದ್ದಾರೆ. ಹಿಮಂತ ಶರ್ಮಾ ಅವರು 2015 ರಲ್ಲಿ ರಾಹುಲ್ ಗಾಂಧಿ ವಿರುದ್ಧ ದೂಷಿಸಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.  ಅಂದಿನಿಂದ ಅವರು ರಾಹುಲ್  ಗಾಂಧಿಯವರ ತೀವ್ರ ಟೀಕಾಕಾರಾಗಿದ್ದಾರೆ.

ಬುಧವಾರ    ರಾಹುಲ್  ಗಾಂಧಿಯವರ ಮೇಲೆ ವಾಗ್ದಾಳಿ ನಡೆಸಿದ ಶರ್ಮಾ ಅವರು  ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯನ್ನು "ಶತಮಾನದ ಹಾಸ್ಯ" ಎಂದು ಕರೆದರು.

ಭಾರತ್ ಜೋಡೋ ಯಾತ್ರೆ   150 ದಿನಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 3,500 ಕಿ.ಮೀ. ಸಾಗಲಿದ್ದು, ಯಾತ್ರೆಯನ್ನು ಬುಧವಾರ ಆರಂಭಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News