ಇಂಟರ್ನೆಟ್ ಸ್ಥಗಿತಗೊಳಿಸಿ ನಮ್ಮ ಮಾಹಿತಿಗಳನ್ನೆಲ್ಲಾ ಪಡೆಯಲಾಗಿತ್ತು: ಐಟಿ ʼಸರ್ವೇʼ ಕುರಿತು ಆಕ್ಸ್‌ಫಾಮ್ ಇಂಡಿಯಾ
ಹೊಸದಿಲ್ಲಿ: ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್)(Center for Policy Research) ಮತ್ತು ಆಕ್ಸ್‌ಫ್ಯಾಮ್ ಇಂಡಿಯಾ,(Oxfam India) ಆದಾಯ ತೆರಿಗೆ ಇಲಾಖೆಯು ಸೆಪ್ಟೆಂಬರ್ 7 ರಂದು “ಸಮೀಕ್ಷೆ” ಗಾಗಿ ಗುರಿಪಡಿಸಿದ ಎರಡು ಲಾಭರಹಿತ ಸಂಸ್ಥೆಗಳಾಗಿದ್ದು, ಸರ್ವೇ ವೇಳೆ ಐಟಿ ಅಧಿಕಾರಿಗಳೊಂದಿಗೆ ತಾವು ಸಹಕರಿಸಿದ್ದೇವೆ ಮತ್ತು ಭವಿಷ್ಯದಲ್ಲೂ ಸಹಕರಿಸಲಿದ್ದೇವೆ ಎಂದು ಇಂದು ಹೇಳಿದೆ.
ಈ ನಡುವೆ ಎರಡು ಸಂಸ್ಥೆಗಳಲ್ಲಿ, ಆಕ್ಸ್‌ಫ್ಯಾಮ್ ಇಂಡಿಯಾದ ಪ್ರತಿಕ್ರಿಯೆಯು ಮೊಣಚಾಗಿದ್ದು, "ಈ ಸಮೀಕ್ಷೆಯ 35ಕ್ಕೂ ಹೆಚ್ಚಿನ ಗಂಟೆಗಳ ಸಮಯದಲ್ಲಿ, ತಂಡದ ಸದಸ್ಯರಿಗೆ ಆವರಣದಿಂದ ಹೊರಬರಲು ಅವಕಾಶವಿರಲಿಲ್ಲ; ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಯಿತು ಮತ್ತು ಎಲ್ಲಾ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು" ಎಂದು ಹೇಳಿದೆ.
ಐಟಿ ಸಮೀಕ್ಷಾ ತಂಡವು "ಆಕ್ಸ್‌ಫ್ಯಾಮ್ ಇಂಡಿಯಾದ ಹಣಕಾಸು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ನೂರಾರು ಪುಟಗಳ ಡೇಟಾವನ್ನು ತೆಗೆದುಕೊಂಡಿದೆ" ಎಂದ ಸಂಸ್ಥೆಯು "ಆಕ್ಸ್‌ಫ್ಯಾಮ್ ಇಂಡಿಯಾ ಸರ್ವರ್ ಮತ್ತು ಖಾಸಗಿ ಮೊಬೈಲ್ ಫೋನ್‌ಗಳನ್ನು ಕ್ಲೋನಿಂಗ್ ಮಾಡುವ ಮೂಲಕ ಅವರು ಎಲ್ಲಾ ಡೇಟಾವನ್ನು ತೆಗೆದುಕೊಂಡಿದ್ದಾರೆ" ಎಂದು ಹೇಳಿದೆ.
ಸಮೀಕ್ಷಾ ತಂಡವು "ಸಭ್ಯ ಮತ್ತು ವೃತ್ತಿಪರವಾಗಿದೆ" ಎಂದು ಹೇಳಿದ ಸಂಸ್ಥೆಯು, "ಅದರ ವ್ಯಾಪಕ ಅಧಿಕಾರಗಳ ವಿಶಾಲ ವ್ಯಾಪ್ತಿಯೊಂದಿಗೆ ಸಮೀಕ್ಷೆಯ ಪ್ರಕ್ರಿಯೆಯು ಕಾನೂನು-ಪಾಲನೆ ಮತ್ತು ಸಮುದಾಯ ಕೇಂದ್ರಿತ ಸಂಸ್ಥೆಯಾದ ಆಕ್ಸ್‌ಫ್ಯಾಮ್ ಇಂಡಿಯಾವನ್ನು ನಿರಾಶೆಗೊಳಿಸಿತು" ಎಂದು ಹೇಳಿದೆ.
ಆಕ್ಸ್‌ಫ್ಯಾಮ್ ಇಂಡಿಯಾ ಪ್ರಕಾರ, ಕಳೆದ ಎಂಟು ತಿಂಗಳುಗಳು ಸಂಸ್ಥೆಗೆ ಸವಾಲಿನ ದಿನಗಳಾಗಿತ್ತು. ಭಾರತದಲ್ಲಿನ 16 ರಾಜ್ಯಗಳಲ್ಲಿ ಕೋವಿಡ್ ಬಿಕ್ಕಟ್ಟಿಗೆ ಸಂಬಂಧಿಸಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವ ಸಮಯದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಆಕ್ಸ್‌ಫ್ಯಾಮ್ ಇಂಡಿಯಾಕ್ಕೆ ಅದರ FCRA ನವೀಕರಣ ಪರವಾನಗಿಯನ್ನು ಡಿಸೆಂಬರ್ 2021 ರಲ್ಲಿ ನಿರಾಕರಿಸಿತು.
CPR ತನ್ನ ಹೇಳಿಕೆಯಲ್ಲಿ "ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸಸ್ ರಿಸರ್ಚ್ ನೆಟ್‌ವರ್ಕ್‌ನ 24 ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದ್ದು, CPR ಎಲ್ಲಾ ಅಗತ್ಯ ಅನುಮೋದನೆಗಳು ಮತ್ತು ನಿರ್ಬಂಧಗಳನ್ನು ಹೊಂದಿದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ಅಡಿಯಲ್ಲಿ ಸ್ವೀಕರಿಸುವವರಾಗಿ ಸರ್ಕಾರದಿಂದ ಅಧಿಕೃತಗೊಂಡಿದೆ" ಎಂದು ಹೇಳಿದೆ
"ಅನುಸರಣೆಯ ಅತ್ಯುನ್ನತ ಮಾನದಂಡಗಳನ್ನು ಸಂಸ್ಥೆಯು ಹೊಂದಿದ್ದು, ನಾವು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸವಿದೆ. ಅಧಿಕಾರಿಗಳು ಹೊಂದಿರುವ ಯಾವುದೇ ಪ್ರಶ್ನೆಗಳನ್ನು ಪರಿಹರಿಸಲು ನಾವು ಅವರೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದೇವೆ." ಎಂದು ಹೇಳಿದೆ. ಆಕ್ಸ್‌ಫ್ಯಾಮ್ ಇಂಡಿಯಾ "ಭಾರತೀಯ ಕಾನೂನುಗಳಿಗೆ ಅನುಸಾರವಾಗಿದೆ ಮತ್ತು ಆದಾಯ ತೆರಿಗೆ ಮತ್ತು ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ರಿಟರ್ನ್ಸ್ ಸೇರಿದಂತೆ ತನ್ನ ಎಲ್ಲಾ ಶಾಸನಬದ್ಧ ಅನುಸರಣೆಗಳನ್ನು ಸಲ್ಲಿಸಿದೆ" ಎಂದು ಹೇಳಿದೆ.