×
Ad

ಉನ್ನತ ಅಧಿಕಾರಿ ಅವಮಾನಿಸಿದ್ದಾರೆಂದು ವಿಡಿಯೋ ಮಾಡಿ ಆತ್ಮಹತ್ಯೆಗೈದ ಎಎಸ್‌ಐ

Update: 2022-09-10 17:49 IST
ಸಾಂದರ್ಭಿಕ ಚಿತ್ರ  

ಹೊಶಿಯಾರ್ಪುರ್: ಹರ್ಯಾಣ ಪೊಲೀಸ್ ಠಾಣೆಯಲ್ಲಿ(Haryan Police Station) ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ(Suicide) ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಅವರು ವಿಡಿಯೋ ರೆಕಾರ್ಡ್(Video Record) ಮಾಡಿದ್ದು, ಅದರಲ್ಲಿ ತನ್ನ ಸಾವಿಗೆ ಉನ್ನತ ಅಧಿಕಾರಿಯೋರ್ವರು ಕಾರಣ ಎಂದು ಆರೋಪಿಸಿದ್ದಾರೆ. 

ಮೃತಪಟ್ಟ ಎಎಸ್‌ಐ 52ರ ಹರೆಯದ ಸತೀಶ್ ಕುಮಾರ್(Satish Kumar) ಎಂದು ತಿಳಿದು ಬಂದಿದೆ. ಗುಂಡು ಹಾರಿಸಿ ಆತ್ಮಹತ್ಯೆಗೈಯುವ ಮುನ್ನ ಅವರು ತಾಂಡಾ ಸ್ಟೇಷನ್ ಹೌಸ್ ಅಧಿಕಾರಿ ಓಂಕರ್ ಸಿಂಗ್ ಬ್ರಾರ್(Omkar Singh Brar) ವಿರುದ್ಧ ಆರೋಪ ಮಾಡಿದ್ದಾರೆ. ಸೆ.8ರಂದು ನಡೆದ ತಪಾಸಣೆಯ ಸಂದರ್ಭ ಎಸ್‌ಎಚ್‌ಒ ಬ್ರಾರ್ ತನ್ನನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ತಾಜ್ ಸಿಂಗ್ ಚಾಹಲ್, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News