ಹೈದರ್‌ಪೋರಾ ಗುಂಡಿನ ದಾಳಿ: ಮಗನ ಮೃತದೇಹದ ಅಂತ್ಯಸಂಸ್ಕಾರಕ್ಕೆ ಕೋರಿದ ತಂದೆಯ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2022-09-12 08:15 GMT

ಹೊಸದಿಲ್ಲಿ: ನವೆಂಬರ್‌ನಲ್ಲಿ ಶ್ರೀನಗರದ ಹೈದರ್‌ಪೋರಾ(Hyderpora) ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ತನ್ನ ಮಗನ ಶವವನ್ನು ಹಸ್ತಾಂತರಿಸುವಂತೆ ಕೋರಿ ಕಾಶ್ಮೀರಿ ನಿವಾಸಿ ಮೊಹಮ್ಮದ್ ಲತೀಫ್ ಮ್ಯಾಗ್ರೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme court) ಸೋಮವಾರ ವಜಾಗೊಳಿಸಿದೆ ಎಂದು Livelaw ವರದಿ ಮಾಡಿದೆ. ಸರ್ಕಾರ ಈಗಾಗಲೇ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಿದೆ ಎಂದು ಕೋರ್ಟ್ ಹೇಳಿದೆ.

ನವೆಂಬರ್ 15 ರಂದು ಹೈದರ್‌ಪೋರಾದ ವಾಣಿಜ್ಯ ಸಂಕೀರ್ಣದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ನಾಲ್ವರಲ್ಲಿ ಮೊಹಮ್ಮದ್ ಅಮೀರ್ ಮ್ಯಾಗ್ರೆ ಒಬ್ಬರಾಗಿದ್ದರು. ಹತರಾದವರ ಪೈಕಿ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯ ಸದಸ್ಯ ಹೈದರ್, ಹಾರ್ಡ್‌ವೇರ್ ಅಂಗಡಿ ಮಾಲೀಕ ಮೊಹಮ್ಮದ್ ಅಲ್ತಾಫ್ ಭಟ್, ದಂತವೈದ್ಯ ಮತ್ತು ಉದ್ಯಮಿ ಮುದಾಸಿರ್ ಗುಲ್ ಮತ್ತು ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್‌ ಅಮೀರ್ ಮ್ಯಾಗ್ರೆ ಎಂದು ಪೊಲೀಸರು ಗುರುತಿಸಿದ್ದಾರೆ.

ಅವರ ದೇಹವನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿಲ್ಲ. ನವೆಂಬರ್ 16 ರಂದು, ಶ್ರೀನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಕುಪ್ವಾರ ಜಿಲ್ಲೆಯ ವಡ್ಡರ್ ಪಯೀನ್ ಸ್ಮಶಾನದಲ್ಲಿ ಅಧಿಕಾರಿಗಳು ಅವರನ್ನು ಸಮಾಧಿ ಮಾಡಿದ್ದರು.

ಅಮೀರ್ ಮ್ಯಾಗ್ರೆ ಉಗ್ರಗಾಮಿ ಎಂದು ಪೊಲೀಸರು ಹೇಳಿದರೆ, ಆತನ ಕುಟುಂಬವು ಆತ ನಿರಪರಾಧಿ ಎಂದು ಸಮರ್ಥಿಸಿಕೊಂಡಿದೆ.

ಲತೀಫ್ ಮ್ಯಾಗ್ರೆ ಅವರು ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಮಗನ ಶವವನ್ನು ಕುಟುಂಬಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಬಹುದು ಎಂದಿದ್ದರು. ಆದಾಗ್ಯೂ, ಜುಲೈನಲ್ಲಿ, ಮ್ಯಾಗ್ರೆ ಅವರ ವಕೀಲ ಆನಂದ್ ಗ್ರೋವರ್ ಅವರು ತಮ್ಮ ಕಕ್ಷಿದಾರರು ತಮ್ಮ ಮಗನ ದೇಹವನ್ನು ಹೊರತೆಗೆಯಲು ಒತ್ತಾಯಿಸುತ್ತಿಲ್ಲ, ಅವರು ಅಂತಿಮ ವಿಧಿಗಳನ್ನು ಮಾತ್ರ ಮಾಡಲು ಬಯಸಿದ್ದರು ಎಂದು ಹೇಳಿದ್ದರು.

ಅಲ್ಲದೇ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

ಸೋಮವಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠವು ಪರಿಹಾರದ ಬಗ್ಗೆ ಆದೇಶವನ್ನು ಪುನರುಚ್ಚರಿಸಿತು. ಅಮೀರ್ ಮ್ಯಾಗ್ರೆಯನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಕುಟುಂಬಕ್ಕೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಅದು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.

"ದೇಹವನ್ನು ಸಮಾಧಿ ಮಾಡಿದ ನಂತರ, ಅದನ್ನು ಕಾನೂನಿನ ಕಸ್ಟಡಿಯಲ್ಲಿ ಪರಿಗಣಿಸಲಾಗುತ್ತದೆ" ಎಂದು ಪಾರ್ದಿವಾಲಾ ಹೇಳಿದರು. "ಒಮ್ಮೆ ಸಮಾಧಿ ಮಾಡಿದ ದೇಹಕ್ಕೆ ತೊಂದರೆಯಾಗಬಾರದು. ವಿಘಟನೆಯು ನ್ಯಾಯದ ಹಿತಾಸಕ್ತಿಯಲ್ಲಿದೆ ಎಂದು ತೋರಿಸದ ಹೊರತು ನ್ಯಾಯಾಲಯವು ದೇಹವನ್ನು ವಿಸರ್ಜಿಸಲು ಆದೇಶಿಸುವುದಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News