×
Ad

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ: ಭಾರತದಲ್ಲಿ ಬೆಲೆ ಪರಿಷ್ಕರಣೆಯಿಲ್ಲ

Update: 2022-09-12 16:48 IST

ಹೊಸದಿಲ್ಲಿ: ಅಂತಾರಾಷ್ಟ್ರೀಯ ತೈಲ(Oil) ಬೆಲೆಗಳು ಕಳೆದ ಏಳು ತಿಂಗಳುಗಳಲ್ಲಿಯೇ ಕನಿಷ್ಠ ಮಟ್ಟದ ಇಳಿಕೆಯನ್ನು ಕಂಡಿದ್ದರೂ ದೇಶದ ಸರಕಾರಿ ಒಡೆತನದ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್(petrol, diesel) ಬೆಲೆಗಳನ್ನು ಪರಿಷ್ಕರಿಸಿಲ್ಲ. ಕಳೆದ ಐದು ತಿಂಗಳುಗಳ ಅವಧಿಯಲ್ಲಿ ಏರುತ್ತಿದ್ದ ತೈಲ ಬೆಲೆಗಳ ಹೊರತಾಗಿಯೂ ಬೆಲೆಗಳನ್ನು ಏರಿಸದೇ ಇರುವುದರಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಈಗ ಬೆಲೆಗಳನ್ನು ಇಳಿಸಲಾಗಿಲ್ಲ ಎಂದು ತಿಳಿಯಲಾಗಿದೆ ಎಂದು economictimes ವರದಿ ಮಾಡಿದೆ.

ಅಂತಾರಾಷ್ಟ್ರೀಯ ಬೆಂಚ್‍ಮಾರ್ಕ್ ಬ್ರೆಂಟ್ ಕಚ್ಛಾ ತೈಲ ಬೆಲೆ ಕಳೆದ ವಾರ ತಲಾ ಬ್ಯಾರೆಲ್‍ಗೆ 90 ಅಮೆರಿಕನ್ ಡಾಲರ್‍ಗೆ ಇಳಿಕೆಯಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿಂದೀಚೆಗೆ ಇದೇ ಮೊದಲ ಬಾರಿ ತೈಲ ಬೆಲೆಗಳಲ್ಲಿ ಇಷ್ಟೊಂದು ಇಳಿಕೆಯಾಗಿದೆ. ಈಗ ಬೆಲೆ ತಲಾ ಬ್ಯಾರೆಲ್‍ಗೆ 92.84 ಅಮೆರಿಕನ್ ಡಾಲರ್ ಆಗಿದ್ದು ಇದು ಕೂಡ ಆರು ತಿಂಗಳಿನಲ್ಲಿ ಕನಿಷ್ಠ ಬೆಲೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾದಾಗ ಬೆಲೆಗಳಲ್ಲಿ ಏರಿಕೆ ಮಾಡಿರದೇ ಇದ್ದುದರಿಂದ ತೈಲ ಕಂಪೆನಿಗಳು ತಲಾ ಲೀಟರ್ ಡೀಸೆಲ್ ಮೇಲೆ ರೂ. 20-25 ಹಾಗೂ ತಲಾ ಲೀಟರ್ ಪೆಟ್ರೋಲ್ ಮೇಲೆ ರೂ. 14-18ರಷ್ಟು  ನಷ್ಟ ಅನುಭವಿಸಿವೆ. ಈಗ  ತೈಲ ಬೆಲೆಗಳಲ್ಲಿ ಇಳಿಕೆಯಾಗಿರುವುದರಿಂದ ತೈಲ ಕಂಪೆನಿಗಳ ನಷ್ಟದ ಪ್ರಮಾಣವೂ ಇಳಿಕೆಯಾಗಿದೆ.

ಇದನ್ನೂ ಓದಿ:  ಕಲ್ಲಡ್ಕ: ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News