×
Ad

ಸಮನ್ಸ್ 'ಟೈಪಿಂಗ್ ದೋಷ': ಮಧ್ಯರಾತ್ರಿ ಈಡಿ ಕಚೇರಿಗೆ ಹಾಜರಾದ ಅಭಿಷೇಕ್ ಬ್ಯಾನರ್ಜಿ ನಾದಿನಿ

Update: 2022-09-12 17:32 IST
Photo: Twitter

ಹೊಸದಿಲ್ಲಿ: ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರ ನಾದಿನಿ ಮನೇಕಾ ಗಂಭೀರ್ (Maneka Gambhir) ಅವರು ಸೋಮವಾರ ಅಪರಾಹ್ನ ಕೊಲ್ಕತ್ತಾದ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿದ್ದಾರೆ. ಆದರೆ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ಕಳುಹಿಸಿದ್ದ ನೋಟಿಸಿನಲ್ಲಿ ಸೋಮವಾರ ಅಪರಾಹ್ನ 12.30 ಎಂದು ಬರೆಯುವ ಬದಲು 12.30 (ರಾತ್ರಿ) ಎಂದು ಬರೆಯಲಾಗಿದ್ದರಿಂದ ಅವರು ಕಳೆದ ರಾತ್ರಿಯೇ ಹಾಜರಾಗಿದ್ದು ಭಾರೀ ಸುದ್ದಿಯಾಗಿತ್ತು.

ಮಹಿಳೆಯೊಬ್ಬರನ್ನು ರಾತ್ರಿ ಹೊತ್ತು ವಿಚಾರಣೆಗೆ ಕರೆಸುವುದು ಆಕೆಯ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಆದರೆ ಜಾರಿ ನಿರ್ದೇಶನಾಲಯದ ನೋಟಿಸಿನಲ್ಲಿ ಪ್ರಮಾದದಿಂದ ಅಪರಾಹ್ನದ ಬದಲು ರಾತ್ರಿ 12.30 ಎಂದು ಬರೆಯಲಾಗಿತ್ತೆಂದು ವರದಿಯಾಗಿದೆ.

ಮನೇಕಾ ಅವರು ರಾತ್ರಿಯೇ ಜಾರಿ ನಿರ್ದೇಶನಾಲಯಕ್ಕೆ ಹಾಜರಾದಾಗ ತನ್ನ ತಪ್ಪು ಅರಿತ ನಿರ್ದೇಶನಾಲಯ ಹೊಸ ನೋಟಿಸ್ ಜಾರಿಗೊಳಿಸಿ ಮೊದಲನೆಯ ನೋಟಿಸಿನಲ್ಲಿ ಪ್ರಮಾದವಶಾತ್ ತಪ್ಪಾಗಿತ್ತು ಹಾಗೂ 'ಟೈಪಿಂಗ್ ದೋಷ' ಎಂದು ಹೇಳಿತ್ತು.

ಇದನ್ನೂ ಓದಿ: ಪಾಕ್ ಆಟಗಾರರು ಕ್ಯಾಚ್ ಕೈಚೆಲ್ಲಿದ ವೀಡಿಯೋ ಬಳಸಿ ರಸ್ತೆ ಸುರಕ್ಷತಾ ಸಂದೇಶ ಸಾರಿದ ದಿಲ್ಲಿ ಪೊಲೀಸರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News