×
Ad

ಎರಡನೇ ಅವಧಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ: ವರದಿ

Update: 2022-09-13 11:25 IST
Photo:twitter

ಹೊಸದಿಲ್ಲಿ: ಹಿರಿಯ ವಕೀಲ ಮುಕುಲ್ ರೋಹಟಗಿ (Mukul Rohatgi )ಅವರು ಭಾರತದ ಅಟಾರ್ನಿ ಜನರಲ್ (Attorney General)ಆಗಿ ಎರಡನೇ ಅವಧಿ ಆರಂಭಿಸಲಿದ್ದಾರೆ ಎಂದು ಮೂಲಗಳು ಇಂದು ತಿಳಿಸಿವೆ.

67 ವರ್ಷದ ಮುಕುಲ್ ರೋಹಟಗಿ ಅವರು ಜೂನ್ 2017 ರಲ್ಲಿ ಅಟಾರ್ನಿ ಜನರಲ್ ಹುದ್ದೆಯಿಂದ ಕೆಳಗಿಳಿದಿದ್ದರು. ರೋಹಟಗಿ ನಂತರ ಕೆ.ಕೆ. ವೇಣುಗೋಪಾಲ್ ಅಧಿಕಾರ ವಹಿಸಿಕೊಂಡಿದ್ದರು.

ವೇಣುಗೋಪಾಲ್ ಅವರ ವಿಸ್ತೃತ ಅಧಿಕಾರಾವಧಿಯು ಸೆಪ್ಟೆಂಬರ್ 30 ರಂದು ಕೊನೆಗೊಳ್ಳುತ್ತದೆ. ಅವರು ಐದು ವರ್ಷಗಳ ಕಾಲ ಕೇಂದ್ರದ ಉನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಮುಕುಲ್ ರೋಹಟಗಿ ಅಕ್ಟೋಬರ್ 1 ರಂದು ತಮ್ಮ ಎರಡನೇ ಅವಧಿಯನ್ನು ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಟಗಿ ಅವರು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

2017 ರಲ್ಲಿ ರೋಹಟಗಿ ಅವರು ಅಧಿಕಾರವನ್ನು ತೊರೆದ ನಂತರವೂ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ಸೂಕ್ಷ್ಮ ಕಾನೂನು ವಿಷಯಗಳ ಕುರಿತಂತೆ ಸರಕಾರವು ರೋಹಟಗಿ ಅವರನ್ನು ಸಂಪರ್ಕಿಸಿದೆ ಎಂದು ಮೂಲಗಳು ಹೇಳುತ್ತವೆ.

2014 ರಲ್ಲಿ ಬಿಜೆಪಿ ಭಾರೀ ಜನಾದೇಶವನ್ನು ಪಡೆದು  ಅಧಿಕಾರಕ್ಕೆ ಬಂದ ಕೂಡಲೇ ರೋಹಟಗಿ ಅವರನ್ನು ಸರಕಾರದ ಉನ್ನತ ವಕೀಲರಾಗಿ ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News