ದಿಗಂಬರ ಕಾಮತ್ ನೇತೃತ್ವದಲ್ಲಿ ಗೋವಾ ಕಾಂಗ್ರೆಸ್ ನ 8 ಶಾಸಕರು ಬಿಜೆಪಿಗೆ ಸೇರ್ಪಡೆ

Update: 2022-09-14 07:25 GMT
Photo: ndtv

ಪಣಜಿ: ಗೋವಾ ಕಾಂಗ್ರೆಸ್ ಪಕ್ಷದ  11 ಶಾಸಕರಲ್ಲಿ ಎಂಟು ಮಂದಿ ಪ್ರಮುಖ ನಾಯಕರಾದ ದಿಗಂಬರ ಕಾಮತ್ ಹಾಗೂ  ಮೈಕೆಲ್ ಲೋಬೊ ನೇತೃತ್ವದಲ್ಲಿ ಆಡಳಿತ ರೂಢ ಬಿಜೆಪಿಗೆ ಬುಧವಾರ ಸೇರ್ಪಡೆಗೊಂಡರು. ಈ ಮೂಲಕ  ವಿರೋಧ ಪಕ್ಷ ಕಾಂಗ್ರೆಸ್ ಬಲ  ಕೇವಲ ಮೂವರು ಶಾಸಕರಿಗೆ ಇಳಿದಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ (ಯುನೈಟ್ ಇಂಡಿಯಾ ಮಾರ್ಚ್) ನಡೆಯುತ್ತಿರುವಾಗಲೇ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್‌ಗೆ ಭಾರೀ  ಮುಜುಗರವನ್ನುಂಟುಮಾಡಿದೆ. ಈ ಯಾತ್ರೆಯನ್ನು ಟೀಕೆ ಮಾಡುತ್ತಿರುವ ಬಿಜೆಪಿ  "ಮೊದಲು ನಿಮ್ಮ ಪಕ್ಷವನ್ನು ಜೋಡಿಸಿ (ಒಗ್ಗೂಡಿಸಿ)" ಎಂದು ಗೇಲಿ ಮಾಡುತ್ತಿದೆ.

"ಇದು ಕಾಂಗ್ರೆಸ್ ಚೋಡೋ (ಕಾಂಗ್ರೆಸ್ ತೊರೆಯಿರಿ), ಬಿಜೆಪಿ ಕೋ ಜೋಡೋ" ಎಂದು ಬಿಜೆಪಿಗೆ ಕಾಂಗ್ರೆಸ್ ಶಾಸಕರು ಸೇರಿದ ಬಳಿಕ  ಮೈಕೆಲ್ ಲೋಬೋ ವ್ಯಂಗ್ಯವಾಡಿದರು.

ಎಂಟು ಶಾಸಕರು ಒಂದು ಗುಂಪಾಗಿ ಬಿಜೆಪಿಗೆ ಸೇರಿರುವುದರಿಂದ  ಶಾಸಕರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆಯಿಂದ  ತಪ್ಪಿಸಿಕೊಳ್ಳಬಹುದು.

 ಪಕ್ಷಾಂತರಿ ಶಾಸಕರು "ಸಂಪತ್ತಿನ ದುರಾಸೆ ಮತ್ತು ಅಧಿಕಾರದ ಹಸಿವು... ಸರ್ವಶಕ್ತ ದೇವರನ್ನು ಧಿಕ್ಕರಿಸಿ" ಅನುಸರಿಸುತ್ತಿರುವ "ಶುದ್ಧ ದುಷ್ಟರ ಸಂಕೇತ" ಎಂದು ಕಾಂಗ್ರೆಸ್ ಮಿತ್ರಪಕ್ಷ, ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಅಪಹಾಸ್ಯದಿಂದ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News