ರಾಜಸ್ಥಾನ: ಮೇಲ್ಜಾತಿಯವರಿಗೆ ಇರಿಸಲಾಗಿದ್ದ ಮಡಕೆಯ ನೀರು ಕುಡಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ; ಪ್ರಕರಣ ದಾಖಲು

Update: 2022-09-15 11:30 GMT
ಸಾಂದರ್ಭಿಕ ಚಿತ್ರ

ಜೈಸಲ್ಮೇರ್:‌ ಮೇಲ್ಜಾತಿಯವರಿಗೆಂದು ಮೀಸಲಿರಿಸಲಾಗಿದ್ದ ಮಡಕೆಯಿಂದ ನೀರು(Water) ಕುಡಿದಿದ್ದಾನೆಂಬ ಕಾರಣಕ್ಕೆ ದಲಿತ(Dalit) ವ್ಯಕ್ತಿಯೊಬ್ಬನ ಮೇಲೆ ಜನರ ಗುಂಪೊಂದು ಕಬ್ಬಿಣದ ರಾಡ್‌ ಮತ್ತು ಕೋಲುಗಳಿಂದ ಬರ್ಬರವಾಗಿ ಹಲ್ಲೆಗೈದಿದ್ದಾರೆನ್ನಲಾದ ಘಟನೆ ರಾಜಸ್ಥಾನದ(Rajasthan) ದಿಗ್ಗಾ ಗ್ರಾಮದಿಂದ ವರದಿಯಾಗಿದೆ.

ಈ ಘಟನೆ ಸಂಬಂಧ ನಾಲ್ಕು ಜನರ ವಿರುದ್ಧ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಸಂತ್ರಸ್ತ ಚತುರಾ ರಾಮ್‌ ತನ್ನ ಪತ್ನಿಯೊಂದಿಗೆ ದಿಗ್ಗಾ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭ ದಾರಿ ಮಧ್ಯ ದಿನಸಿ ಅಂಗಡಿ ಬಳಿ ತೆರಳಿದ್ದರು. ಅಲ್ಲಿ ಅಂಗಡಿಯ ಹೊರಗೆ ಮಡಕೆಯಲ್ಲಿದ್ದ ನೀರನ್ನು ಈ ಸಂದರ್ಭ ಚತುರಾ ರಾಮ್‌ ಕುಡಿದಿದ್ದನು. ಇದನ್ನು ಗಮನಿಸಿದ ಅಲ್ಲಿದ್ದ ನಾಲ್ಕೈದು ಮಂದಿ ಆತನನ್ನು ನಿಂದಿಸಿ, ಮೇಲ್ಜಾತಿಯವರಿಗಾಗಿ ಇರಿಸಲಾಗಿದ್ದ ಮಡಕೆಯ ನೀರನ್ನು ಕುಡಿದಿದ್ದೇಕೆ ಎಂದು ಪ್ರಶ್ನಿಸಿ ಹಲ್ಲೆಗೈದಿದ್ದರು ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಚತುರ ರಾಮ್‌ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತನ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣ: ಆರೋಪಿ ಹರ್ಷಿತ್‌ಗೆ ಜಾಮೀನು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News