×
Ad

ಸಾರ್ವಕಾಲಿಕ ಶ್ರೇಷ್ಠ ಆಟಗಾರ ರೋಜರ್ ಫೆಡರರ್ ಟೆನಿಸ್‌ನಿಂದ ನಿವೃತ್ತಿ

Update: 2022-09-15 19:13 IST
ರೋಜರ್ ಫೆಡರರ್ (PTI)

 ಪ್ಯಾರಿಸ್, ಸೆ.15: ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರ ಪೈಕಿ ಒಬ್ಬರಾಗಿರುವ ರೋಜರ್ ಫೆಡರರ್ ಸ್ಪರ್ಧಾತ್ಮಕ ಟೆನಿಸ್‌ನಿಂದ ಗುರುವಾರ ನಿವೃತ್ತಿ ಪ್ರಕಟಿಸಿದರು.

ಸ್ವಿಸ್‌ನ ಸೂಪರ್‌ಸ್ಟಾರ್ ಫೆಡರರ್ ತನ್ನ ವೃತ್ತಿಜೀವನದಲ್ಲಿ 20 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಟೆನಿಸ್‌ನಿಂದ ದೂರ ಉಳಿದಿದ್ದರು.

ಮುಂದಿನ ವಾರ ಲಂಡನ್‌ನಲ್ಲಿ ನಡೆಯುವ ಲಾವೆರ್‌ಕಪ್ ಅವರು ಆಡಲಿರುವ ಕೊನೆಯ ಎಟಿಪಿ ಸ್ಪರ್ಧೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News