ಯುವತಿ ನಾಪತ್ತೆ
Update: 2022-09-15 19:22 IST
ಮಂಗಳೂರು, ಸೆ.15: ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಪ್ರಸ್ತುತ ಕಾವೂರಿನ ವಿದ್ಯಾನಗರದಲ್ಲಿ ವಾಸವಾಗಿದ್ದ ದೀಪಾ (19) ಸೆ.13ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4.5 ಅಡಿ ಎತ್ತರದ, ದುಂಡುಮುಖದ, ಬಿಳಿ ಮೈಬಣ್ಣದ ಈಕೆ ಕಾಣೆಯಾಗುವಾಗ ಪರ್ಪಲ್ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪುವೇಲ್ ಧರಿಸಿದ್ದರು. ಕನ್ನಡ ಮಾತನಾಡುವ ಇವರನ್ನು ಕಂಡವರು ಕಾವೂರು ಪೊಲೀಸ್ ಠಾಣೆ ದೂ.ಸಂ: 0824-2220533, ಪೊಲೀಸ್ ನಿರೀಕ್ಷಕರು ಮೊ.ಸಂ: 9480802346, ಪೊಲೀಸ್ ಕಂಟ್ರೋಲ್ ರೂಂ:0824-2220800ಕ್ಕೆ ಮಾಹಿತಿ ನೀಡುವಂತೆ ಕಾವೂರು ಪೊಲೀಸ್ ಠಾಣಾಧಿಕಾರಿ ಮನವಿ ಮಾಡಿದ್ದಾರೆ.