×
Ad

ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್‌ ಕಳ್ಳತನಕ್ಕೆ ವಿಫಲ ಯತ್ನ: 10 ಕಿ.ಮೀ. ಕಿಟಕಿಯಲ್ಲಿ ನೇತಾಡಿದ ಆರೋಪಿ!

Update: 2022-09-15 21:32 IST
Photo: Twitter/@JournoKSSR

ಪಾಟ್ನಾ: ಚಲಿಸುತ್ತಿರುವ ರೈಲಿನ ಕಿಟಕಿಯ ಮೂಲಕ ರೈಲು ಪ್ರಯಾಣಿಕರಿಂದ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಕಳ್ಳನೊಬ್ಬನನ್ನು ಪ್ರಯಾಣಿಕ ಸಮಯ ಪ್ರಜ್ಞೆಯಿಂದ ಹಿಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. 

ಬೇಗುಸರಾಯ್‌ನಿಂದ ಖಗರಿಯಾಗೆ ಹೊರಟಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರು ಸಂಚರಿಸುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ಕಿಟಕಿಯ ಮೂಲಕ ಮೊಬೈಲ್‌ ಕಿತ್ತುಕೊಳ್ಳಲು ಪ್ರಯತ್ನಿಸಿದಾತನನ್ನು ತಕ್ಷಣವೇ ಪ್ರಯಾಣಿಕ ಅರೋಪಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ರೈಲು ಮುಂದಕ್ಕೆ ಹೋದಂತೆ, ಆರೋಪಿ ತನ್ನ ಕೈಯನ್ನು ಬಿಡುವಂತೆ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸುಮಾರು 10 ಕಿಲೋಮೀಟರ್‌ಗಳವರೆಗೆ ಆತನ ಕೈಯನ್ನು ಹಿಡಿದುಕೊಂಡಿದ್ದರಿಂದ ಆತ ನೇತಾಡಿಕೊಂಡೇ ಬಂದಿದ್ದಾನೆ ಎಂದು ವರದಿಯಾಗಿವೆ.

ಅಂತಿಮವಾಗಿ ರೈಲು ಖಗಾರಿಯಾ ಬಳಿ ಬಂದಾಗ ಆತನ ಕೈಯನ್ನು ಬಿಡಲಾಗಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದರು ಎಂದು ndtv.com ವರದಿ ಮಾಡಿದೆ.

ಇದನ್ನೂ ಓದಿ: ಬಿ.ಕೆ.ಹರಿಪ್ರಸಾದ್ ಕ್ರೈಸ್ತರಾದರೆ ನಮ್ಮದೇನೂ ತಕರಾರಿಲ್ಲ: ಸಚಿವ ಮಾಧುಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News