‘ಬಿಗ್ ಬಾಸ್ ಕನ್ನಡ ಒಟಿಟಿ' ರಿಯಾಲಿಟಿ ಶೋನಲ್ಲಿ ರೂಪೇಶ್ ಶೆಟ್ಟಿ ಟಾಪರ್‌

Update: 2022-09-17 07:45 GMT
photo - @ColorsSuper

ಬೆಂಗಳೂರು: ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಅಂತ್ಯವಾಗಿದ್ದು, ಶುಕ್ರವಾರ (ಸೆ.16) ಫಿನಾಲೆ ನಡೆಯಿತು. 

ಅದ್ದೂರಿ ಫಿನಾಲೆ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಟಾಪರ್‌ ಆಗಿದ್ದಾರೆ. ಅವರಿಗೆ ಫಿನಾಲೆ ವೇದಿಕೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.

ಇನ್ನು ರೂಪೇಶ್ ಶೆಟ್ಟಿ  ಜೊತೆಗೆ ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್​ ಹಾಗೂ ಆರ್ಯವರ್ಧನ್​ ಗುರೂಜಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಅವಕಾಶ​ ಪಡೆದಿದ್ದಾರೆ. 

ಸೆಪ್ಟೆಂಬರ್ 24ರಿಂದ  ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಆರಂಭವಾಗಲಿದ್ದು, ನಟ ಕಿಚ್ಚ ಸುದೀಪ್ ಶೋ ನಡೆಸಿಕೊಡಲಿದ್ದಾರೆ. 

ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂದು 72 ವರ್ಷ: ಶುಭಾಶಯ ಕೋರಿದ ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ, ಕೇಜ್ರಿವಾಲ್

| |

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News