ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ವಿಶ್ವಸಂಸ್ಥೆ ಭಾಷಣಕ್ಕೆ ಅವಕಾಶ ಭಾರತ ಸಹಿತ 191 ರಾಷ್ಟ್ರಗಳ ಬೆಂಬಲ

Update: 2022-09-17 16:34 GMT

     ವಿಶ್ವಸಂಸ್ಥೆ,ಸೆ.17: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮುಂದಿನ ವಾರ ಭಾಷಣ ಮಾಡಲು ಅವಕಾಶ ನೀಡುವುದಕ್ಕೆ ಭಾರತ ಸೇರಿದಂತೆ 100ಕ್ಕೂ ಅಧಿಕ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ರಶ್ಯದ ಆಕ್ರಮಣದ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಬಳಿಕ ಝೆಲೆ ಪೂರ್ವಭಾವಿಯಾಗಿ ರೆಕಾರ್ಡ್ ಮಾಡಲಾದ ಝೆಲೆನ್‌ಸ್ಕಿ ಅವರ ಭಾಷಣ ಪ್ರಸಾರವಾಗಲಿದೆ.

ಜಾಗತಿಕ ನಾಯಕರನ್ನುದ್ದೇಶಿಸಿ ಝೆಲೆನ್‌ಸ್ಕಿ ಅವರು ವಿಡಿಯೋ ಮೂಲಕ ಭಾಷಣ ಮಾಡುವುದಕ್ಕೆ ಅನುಮತಿ ನೀಡುವ ನಿರ್ಧಾರಕ್ಕೆ 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶುಕ್ರವಾರ ಅನುಮತಿ ನೀಡಿತು. ಈ ನಿರ್ಧಾರದ ಪರವಾಗಿ 101 ಮತಗಳು ಬಿದ್ದರೆ, ಬೆಲಾರಸ್, ಚೀನಾ, ಎರಿಟ್ರಿಯಾ, ರಶ್ಯ, ಸಿರಿಯಾ ಸೇರಿದಂತೆ ಏಳು ರಾಷ್ಟ್ರಗಳು ವಿರುದ್ಧವಾಗಿ ಮತ ಚಲಾಯಿಸಿದ್ದವು. 19 ರಾಷ್ಟ್ರಗಳು ಮತದಾನದಿಂದ ದೂರವುಳಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News