×
Ad

ಶಾಲೆಯ ಲಿಫ್ಟ್ ಬಾಗಿಲಿಗೆ ಸಿಲುಕಿ ಶಿಕ್ಷಕಿ ಮೃತ್ಯು

Update: 2022-09-18 11:24 IST

ಮುಂಬೈ: ಮುಂಬೈನಲ್ಲಿ ಚಲಿಸುವ ಲಿಫ್ಟ್  ಬಾಗಿಲಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.

ಮೃತ ಜೆನೆಲ್ ಫೆರ್ನಾಂಡಿಸ್ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಲ್ಲಿ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

" ಜೆನೆಲ್ ಅವರು ಲಿಫ್ಟ್ ಅನ್ನು ಪ್ರವೇಶಿಸಿದ ತಕ್ಷಣ   ಲಿಫ್ಟ್ ಚಲಿಸಲು ಆರಂಭಿಸಿತು. ಆಗ ಲಿಫ್ಟ್ ಬಾಗಿಲಲ್ಲಿ ಅವರು ಸಿಲುಕಿಕೊಂಡಿದ್ದರು" ಎಂದು ವಲಯ 11 ರ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಹೇಳಿದರು.

ಶಾಲೆಯ ಸಿಬ್ಬಂದಿ ಶಿಕ್ಷಕಿಗೆ ಸಹಾಯ ಮಾಡಲು ಧಾವಿಸಿದರು ಹಾಗೂ ಅವರನ್ನು  ಹೊರಗೆ ಎಳೆದರು. ಆದರೆ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬರುವಾಗಲೇ  ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

"ಪ್ರಾಥಮಿಕ ತನಿಖೆಯ ಸಮಯದಲ್ಲಿ ನಾವು ಆಕಸ್ಮಿಕ ಸಾವಿನ  ಪ್ರಕರಣವನ್ನು ದಾಖಲಿಸಿದ್ದೇವೆ. ಯಾವುದೇ ತಪ್ಪಾಗಿದ್ದರೆ, ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಇದನ್ನೂ ಓದಿ: ಗರ್ಲ್ಸ್ ಹಾಸ್ಟೆಲ್ ನ ಖಾಸಗಿ ವೀಡಿಯೊ ಆನ್ ಲೈನ್ ನಲ್ಲಿ ಸೋರಿಕೆ: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಭಾರೀ  ಪ್ರತಿಭಟನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News