ಗುಜರಾತ್ ಚುನಾವಣೆ: ಎಎಪಿ ಸಹ ಉಸ್ತುವಾರಿಯಾಗಿ ಸಂಸದ ರಾಘವ್ ಚಡ್ಡಾ ನೇಮಕ

Update: 2022-09-18 09:34 GMT
Photo:twitter

ಹೊಸದಿಲ್ಲಿ: ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನೆಲ್ಲಾ ಪ್ರಯತ್ನವನ್ನು ಮುಂದುವರಿಸಿರುವ ಆಮ್ ಆದ್ಮಿ ಪಕ್ಷವು (AAP) ಸಂಸದ ರಾಘವ್ ಚಡ್ಡಾ (Raghav Chadha )ಅವರನ್ನು  ಗುಜರಾತ್ ಸಹ ಉಸ್ತುವಾರಿಯನ್ನಾಗಿ ರವಿವಾರ ನೇಮಿಸಿದೆ ಎಂದು NDTV ವರದಿ ಮಾಡಿದೆ.

ರಾಘವ್ ಅವರನ್ನು ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲೂ ಸಹ ಉಸ್ತುವಾರಿಯನ್ನಾಗಿ ನೇಮಿಸಿತ್ತು. ಪಂಜಾಬ್ ನಲ್ಲಿ ಎಎಪಿ ಭಾರೀ ಗೆಲುವು ದಾಖಲಿಸಿ ಗದ್ದುಗೆ ಏರಿದೆ. 117 ಕ್ಷೇತ್ರಗಳ ಪೈಕಿ 92ರಲ್ಲಿ ಜಯ ಸಾಧಿಸಿತ್ತು.

ಚಡ್ಡಾ ಅವರು ದಿಲ್ಲಿ ಹಾಗೂ  ಪಂಜಾಬ್ ಎರಡರಲ್ಲೂ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಪಕ್ಷವು ಅವರನ್ನು ಯುವಜನರ  ಅತ್ಯಂತ ಜನಪ್ರಿಯ ನಾಯಕನೆಂದು ಪರಿಗಣಿಸಿದೆ.

ಎಎಪಿ 2017 ರ ರಾಜ್ಯ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಪಾದಾರ್ಪಣೆ ಮಾಡಿತ್ತು. ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿತ್ತು.

ರಾಜ್ಯದ 182 ಸ್ಥಾನಗಳ ಪೈಕಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಸವಾಲನ್ನು ಒಡ್ಡಿತ್ತು. ಕುತೂಹಲ ಕೆರಳಿಸಿದ  ಮತ ಎಣಿಕೆ ದಿನ ಬಿಜೆಪಿ 99 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News