×
Ad

ಎಸಿಬಿ ಅಧಿಕಾರಿಯನ್ನು ತಳ್ಳಾಡಿದ ಆಪ್ ಶಾಸಕನ ಬೆಂಬಲಿಗರು: ವಿಡಿಯೋ ವೈರಲ್

Update: 2022-09-18 15:11 IST
Photo:ANI

ಹೊಸದಿಲ್ಲಿ: ವಕ್ಫ್‌ ಮಂಡಳಿ ಅಕ್ರಮಕ್ಕೆ ಸಂಬಂಧಿಸಿದಂತೆ ದಿಲ್ಲಿ ಎಸಿಬಿಯಿಂದ ಬಂಧನಕ್ಕೊಳಗಾಗಿರುವ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರ ಬೆಂಬಲಿಗರು ಭ್ರಷ್ಟಾಚಾರ ನಿಗ್ರಹ ದಳದ(ACB) ಅಧಿಕಾರಿಯೊಬ್ಬರನ್ನು ಎಳೆದಾಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಅದರಲ್ಲಿ ಎಸಿಬಿ ಅಧಿಕಾರಿಯೊಬ್ಬರನ್ನು ಜನರ ಗುಂಪೊಂದು ತಳ್ಳಾಡುತ್ತಿರುವುದು ದಾಖಲಾಗಿದೆ. ಅಧಿಕಾರಿಯನ್ನು ತಳ್ಳಾಡುತ್ತಿರುವವರು ಬಂಧಿತ ಶಾಸಕ ಅಮಾನತುಲ್ಲಾರ ಬೆಂಬಲಿಗರು ಎನ್ನಲಾಗಿದ್ದು, ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವಕ್ಫ್ ಮಂಡಳಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಅಮಾನತುಲ್ಲಾ ಖಾನ್ ಅವರನ್ನು ಶುಕ್ರವಾರ ಬಂಧಿಸಿದ್ದರು. ಅಮಾನತುಲ್ಲಾ ಅವರ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಎಸಿಬಿ ನಡೆಸಿದ ಶೋಧ ಕಾರ್ಯ ವೇಲೆ ನಗದು ಹಾಗೂ ಪರವಾನಗಿ ಇಲ್ಲದ ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News