×
Ad

ಕೇರಳ: ಭಾರತ್‌ ಜೋಡೋ ಯಾತ್ರೆ ನಡುವೆ ದೋಣಿ ರೇಸ್‌ನಲ್ಲಿ ಭಾಗಿಯಾದ ರಾಹುಲ್‌ ಗಾಂಧಿ

Update: 2022-09-19 20:13 IST
Photo: twitter/SevadalSKO

ತಿರುವನಂತಪುರ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ ಕೇರಳದ ಪುನ್ನಮಾಡ ಸರೋವರದಲ್ಲಿ ಸ್ನೇಕ್ ಬೋಟ್ ರೇಸ್ ನಲ್ಲಿ ಪಾಲ್ಗೊಂಡರು. ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವೀಡಿಯೊ ಕ್ಲಿಪ್‌ನಲ್ಲಿ ರಾಹುಲ್‌ ಗಾಂಧೀ ಇತರರೊಂದಿಗೆ  ದೋಣಿಯಲ್ಲಿ ಸಾಗುತ್ತಿರುವುದು ಕಂಡು ಬಂದಿದೆ.

ರಾಹುಲ್ ಗಾಂಧಿ ಅವರು ಸೋಮವಾರ ತಮ್ಮ ಪಕ್ಷದ ಭಾರತ್ ಜೋಡೋ ಯಾತ್ರೆಯ 12 ನೇ ದಿನದ ನಡಿಗೆಯ ಮೊದಲು ವಡಕಲ್ ಬೀಚ್‌ನಲ್ಲಿ ಮೀನುಗಾರ ಸಮುದಾಯದೊಂದಿಗೆ ಚರ್ಚೆ ನಡೆಸಿದರು. ಮುಂಜಾನೆಯ ಸಭೆಯಲ್ಲಿ, ಏರುತ್ತಿರುವ ಇಂಧನ ವೆಚ್ಚಗಳು, ಕಡಿಮೆಯಾದ ಸಬ್ಸಿಡಿಗಳು, ಕ್ಷೀಣಿಸುತ್ತಿರುವ ಮೀನು ಸಂಗ್ರಹ ಮತ್ತು ಪರಿಸರ ನಾಶದ ಇತರ ಸಮಸ್ಯೆಗಳ ಸವಾಲುಗಳನ್ನು ಗಾಂಧಿ ಚರ್ಚಿಸಿದ್ದಾರೆ.

“ಬೆಳಗ್ಗೆ 6 ಗಂಟೆಗೆ, ರಾಹುಲ್‌ ಗಾಂಧಿ ಅವರು ಆಲಪ್ಪುಳದ ವಡಕಲ್ ಬೀಚ್‌ನಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು, ಹೆಚ್ಚುತ್ತಿರುವ ಇಂಧನ ವೆಚ್ಚಗಳು, ಕಡಿಮೆಯಾದ ಸಬ್ಸಿಡಿಗಳು, ಕ್ಷೀಣಿಸುತ್ತಿರುವ ಮೀನು ಸಂಗ್ರಹಣೆ, ಸಮಾಜ ಕಲ್ಯಾಣ ಮತ್ತು ಪಿಂಚಣಿಗಳ ಕೊರತೆ, ಅಸಮರ್ಪಕ ಶೈಕ್ಷಣಿಕ ಅವಕಾಶಗಳು ಮತ್ತು ಪರಿಸರ ನಾಶ ಮೊದಲಾದ ಸಮಸ್ಯೆಗಳ ಕುರಿತು ಚರ್ಚಿಸಿದರು" ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ಯಾತ್ರೆಯು ಪುನ್ನಪ್ರಾದಿಂದ ಆರಂಭಗೊಂಡಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ ಮುರಳೀಧರನ್, ಕೋಡಿಕುನ್ನಿಲ್ ಸುರೇಶ್, ರಮೇಶ್ ಚೆನ್ನಿತ್ತಲ, ಕೆ ಸಿ ವೇಣುಗೋಪಾಲ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ರಾಹುಲ್‌ ಗಾಂಧಿ ಜೊತೆಗಿದ್ದರು. ಸುಮಾರು 16 ಕಿ.ಮೀ ಕ್ರಮಿಸಿದ ನಂತರ ಯಾತ್ರೆಯ ಬೆಳಗಿನ ಜಾವ ಕಳವೂರಿನಲ್ಲಿ ಮುಕ್ತಾಯವಾಯಿತು. ಯಾತ್ರೆಯು ಸಂಜೆ 4.30   ಕ್ಕೆ ಪುನರಾರಂಭವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News