×
Ad

ಭಾರತದಿಂದ ಆಸ್ಕರ್‌ ಗೆ ಗುಜರಾತಿ ಚಿತ್ರ 'ಚೆಲೋ ಶೋ' ಆಯ್ಕೆ

Update: 2022-09-20 21:50 IST
Photo: Twitter/DiscussingFilm

ಹೊಸದಿಲ್ಲಿ: ನಿರ್ದೇಶಕ ಪಾನ್ ನಳಿನ್ ಅವರ ಗುಜರಾತಿ ಚಲನಚಿತ್ರ 'ಚೆಲೋ ಶೋ' (ದಿ ಲಾಸ್ಟ್ ಫಿಲ್ಮ್ ಶೋ, Chhello Show) ಅನ್ನು ಮುಂದಿನ ವರ್ಷದ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಭಾರತದ ಅಧಿಕೃತ ಚಿತ್ರವಾಗಿ ಕಳುಹಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

 ಪ್ತಿ ವರ್ಷ ಸ್ಥಳೀಯ ಭಾಷೆಯ ಚಲನಚಿತ್ರವನ್ನು ಆಸ್ಕರ್ ಅಕಾಡೆಮಿಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕಾಗಿ ಕಳುಹಿಸಲಾಗುತ್ತದೆ. ಈ ಚಿತ್ರಗಳಲ್ಲಿ, ಯಾವುದೇ ಐದು ಚಿತ್ರಗಳು ಅಂತಿಮ ಹಂತವನ್ನು ತಲುಪುತ್ತವೆ ಮತ್ತು ಈ ಐದು ಚಲನಚಿತ್ರಗಳು ಆಸ್ಕರ್‌ನ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಳ್ಳುತ್ತವೆ.

ಪ್ರತಿ ವರ್ಷ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ತೀರ್ಪುಗಾರರು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲು ದೇಶದ ಎಲ್ಲಾ ಭಾಷೆಗಳ ಆಯ್ದ ಚಲನಚಿತ್ರಗಳಿಂದ ಒಂದು ಚಲನಚಿತ್ರವನ್ನು ಕಳುಹಿಸುತ್ತಾರೆ. 

ಪನ್ ನಳಿನ್ ನಿರ್ದೇಶನದ ಈ ಚಿತ್ರದಲ್ಲಿ ಭವಿನ್ ರಬಾಡಿ, ಭವೇಶ್ ಶ್ರೀಮಾಲಿ, ರಿಚಾ ಮೀನಾ, ದಿಪೇನ್ ರಾವಲ್ ಮತ್ತು ಪರೇಶ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹದಿಹರೆಯದವರ ಬೆಳ್ಳಿತೆರೆಯ ಕನಸುಗಳ ಕಥೆಯನ್ನು ಈ ಚಿತ್ರ ಹೇಳುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಈ ಚಿತ್ರವು ವಲ್ಲಾಡೋಲಿಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಗೋಲ್ಡ್ ಸ್ಪೈಕ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News