ಗುಂಡಿಗಳನ್ನು ಸೃಷ್ಟಿಸಿದ ಪ್ರಖ್ಯಾತ ಗಣೇಶ ಉತ್ಸವದ ಆಯೋಜಕರಿಗೆ 3.66 ಲಕ್ಷ ರೂ.ದಂಡ ವಿಧಿಸಿದ ಬಿಎಂಸಿ

Update: 2022-09-21 06:21 GMT
Credit: Twitter

ಮುಂಬೈ: ಈ ವರ್ಷ 183 ಗುಂಡಿಗಳನ್ನು ಸೃಷ್ಟಿಸಿದ ಪ್ರಖ್ಯಾತ ಲಾಲ್‌ಬಾಗ್ ಚಾ ರಾಜ ಗಣೇಶ ಉತ್ಸವದ ಆಯೋಜಕರಿಗೆ ಮುಂಬೈನ ಮಹಾನಗರ ಪಾಲಿಕೆ (ಬಿಎಂಸಿ) 3.66 ಲಕ್ಷ ರೂ. ದಂಡ ವಿಧಿಸಿದೆ.

ಪ್ರತಿ ಗುಂಡಿಗೆ 2,000 ರೂ.  ದಂಡ ವಿಧಿಸಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)  Brihanmumbai Municipal Corporation (BMC)ತಿಳಿಸಿದೆ.

ಉತ್ಸವದ ಬಳಿಕ ಪೌರಕಾರ್ಮಿಕರು ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಡಾ.ಬಾಬಾಸಾಹೇಬ್ ರಸ್ತೆ ಹಾಗೂ  ಟಿಬಿ ಕದಂ ಮಾರ್ಗದ ನಡುವಿನ ರಸ್ತೆ ಗುಂಡಿಯಿಂದಾಗಿ ಹಾಳಾಗಿದೆ ಎಂದು ಬಿಎಂಸಿಯ ಇ ವಾರ್ಡ್ ಕಚೇರಿಯು ಲಾಲ್‌ಬಾಗ್ ಚಾ ರಾಜ ಗಣೇಶ ಉತ್ಸವ ಸಮಿತಿಗೆ ನೀಡಿರುವ ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News