ಸುನ್ನಿ ಮಹಲ್ ಫೆಡರೇಶನ್ ಮಂಗಳೂರು ವಲಯ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ಆಯ್ಕೆ

Update: 2022-09-22 11:13 GMT

ಮಂಗಳೂರು, ಸೆ.22: 'ಸಮಸ್ತ'ದ ಮಾರ್ಗದರ್ಶನದಂತೆ ಸುನ್ನಿ ಮಹಲ್ ಫೆಡರೇಶನ್(ಎಸ್‌ಎಂಎಫ್) ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಅದರಂತೆ ಮಂಗಳೂರು ವಲಯ ಸಮಿತಿಯನ್ನು ಇತ್ತೀಚೆಗೆ ರಚಿಸಲಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಅಝೀಝ್ ದಾರಿಮಿ ಮಾತನಾಡಿ, ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಸೂಚಿಯನ್ನು ಮುಂದಿಟ್ಟು ಮೊಹಲ್ಲಾಗಳಲ್ಲಿ ಕಾರ್ಯರೂಪಕ್ಕೆ ತರುವ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕಿದೆ ಎಂದರು.

ಎಸ್.ಬಿ.ದಾರಿಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಾರುನ್ನೂರು ವಿದ್ಯಾಸಂಸ್ಥೆಯ ಸಹಾಯಕ ಪ್ರಾಂಶುಪಾಲ ಹುಸೈನ್ ರಹ್ಮಾನಿ ವಿಷಯ ಮಂಡಿಸಿದರು.

ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಕ್ರಂ ಬಾಖವಿ ದುಆಗೈದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಕಾರ್ಯದರ್ಶಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತು ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನ ಜಿಲ್ಲಾ ಕೋಶಾಧಿಕಾರಿ ಮೆಟ್ರೋ ಶಾಹುಲ್ ಹಮೀದ್ ಹಾಜಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನ ಜಿಲ್ಲಾಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ, ದಾರುನ್ನೂರು ವಿದ್ಯಾ ಸಂಸ್ಥೆಯ ಕೋಶಾಧಿಕಾರಿ ಹನೀಫ್ ಹಾಜಿ ಬಂದರ್, ರಫೀಕ್ ಹಾಜಿ ಕೊಡಾಜೆ ಮೊದಲಾದ ಉಲಮಾ- ಉಮರಾ ನೇತಾರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಂಎಫ್ ಮಂಗಳೂರು ವಲಯ ಸಮಿತಿ ರಿಟೇನಿಂಗ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಎಸ್.ಬಿ.ದಾರಿಮಿ ಚುನಾವಣಾ ಪ್ರಕ್ರಿಯೆ ನಡೆಸಿ ಮುಂದಿನ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ಅಧ್ಯಕ್ಷರಾಗಿ ಯು.ಕೆ.ಎ.ಅಝೀಝ್ ದಾರಿಮಿ ಚೊಕ್ಕಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಕೊಣಾಜೆ, ಕೋಶಾಧಿಕಾರಿಯಾಗಿ ಎನ್.ಕೆ.ಅಬೂಬಕರ್ ಕುದ್ರೋಳಿ, ಉಪಾಧ್ಯಕ್ಷರುಗಳಾಗಿ ಹನೀಫ್ ಹಾಜಿ ಬಂದರ್, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಜತೆ ಕಾರ್ಯದರ್ಶಿಗಳಾಗಿ ಮೆಟ್ರೋ ಶಾಹುಲ್ ಹಮೀದ್ ಹಾಜಿ, ರಿಯಾಝ್ ಹಾಜಿ ಬಂದರ್, ಮುಹಮ್ಮದ್ ಶಾಫಿ ಪಡ್ಡಂದಡ್ಕ, ಜಿಲ್ಲಾ ಕೌನ್ಸಿಲರ್ ಗಳಾಗಿ ಐ.ಮೊಯ್ದಿನಬ್ಬ ಹಾಜಿ, ಇಸ್ಮಾಯೀಲ್ ಹಾಜಿ ಉಳಾಯಿಬೆಟ್ಟು ಮತ್ತು ಮುಹಮ್ಮದ್ ಸ್ವಾಲಿಹ್ ಕಣ್ಣೂರು ಆಯ್ಕೆಯಾದರು.

ಅಬ್ದುಲ್ ರಹ್ಮಾನ್ ದಾರಿಮಿ ತಬೂಕ್ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ವಂದಿಸಿದರು.

ಸುನ್ನಿ ಮಹಲ್ ಫೆಡರೇಶನ್ ನೋಂದಾಯಿತ ಮೊಹಲ್ಲಾಗಳ ಆಯ್ದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News