×
Ad

ಜಗಳದ ನಡುವೆ ಕಾರು ಢಿಕ್ಕಿ ಹೊಡೆದರೂ ಮತ್ತೆ ಜಗಳಕ್ಕಿಳಿದ ವಿದ್ಯಾರ್ಥಿಗಳು: ವೀಡಿಯೋ ವೈರಲ್

Update: 2022-09-22 19:52 IST
screengrab (Twitter/@rishabhhindwan) 

ಹೊಸದಿಲ್ಲಿ: ಗಝಿಯಾಬಾದ್‍ನ ಮಸೂರಿ (Masuri) ಪೊಲೀಸ್ ಠಾಣಾ ಮಿತಿಯಲ್ಲಿ ಬುಧವಾರ ಅಪರಾಹ್ನ ಕಾಲೇಜು ವಿದ್ಯಾರ್ಥಿಗಳ (college students) ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವ ವೇಳೆ ಇಬ್ಬರು ಯುವಕರಿಗೆ ಕಾರೊಂದು ಢಿಕ್ಕಿ ಹೊಡೆದರೂ ಇಬ್ಬರೂ ಏನೂ ಆಗದವರಂತೆ ಮತ್ತೆ ಸಂಘರ್ಷದಲ್ಲಿ ತೊಡಗಿಕೊಂಡಿರುವ ವೀಡಿಯೋ ವೈರಲ್ ಆಗಿದೆ.

ವೀಡಿಯೋದಲ್ಲಿ ರಸ್ತೆ ಮಧ್ಯದಲ್ಲಿ ಯುವಕರು ಜಗಳವಾಡುತ್ತಿರುವುದು ಕಾಣಿಸುತ್ತದೆ. ವಾಹನಗಳು ಬರುತ್ತಿರುವುದನ್ನು ನೋಡುತ್ತಲೇ ಹುಡುಗರು ರಸ್ತೆ ಬದಿ ಓಡುತ್ತಾರೆ ಆದರೆ ಇಬ್ಬರು ಎದುರಿನಿಂದ ಬರುತ್ತಿರುವ ಕಾರನ್ನು ನೋಡದೇ ಇದ್ದುದರಿಂದ ಕಾರು ಅವರಿಗೆ ಢಿಕ್ಕಿ ಹೊಡೆಯುತ್ತದೆ. ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಮೇಲಕ್ಕೆ ಜಿಗಿದು ಕಾರಿನ ಮೇಲೆ ಬಿದ್ದಿದ್ದರು. ಆದರೆ ಅದೃಷ್ಟವಶಾತ್ ಅವರಿಗೇನೂ ಆಗದೇ ಇದ್ದುದರಿಂದ ಮತ್ತೆ ಜಗಳದಲ್ಲಿ ಅವರು ತೊಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಅವರು ಹಲವರನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಇರಾನ್: ಹಿಜಾಬ್‌ ವಿರೋಧಿ ಪ್ರತಿಭಟನೆಗಳ ನಡುವೆ ವಾಟ್ಸ್ಯಾಪ್‌, ಇನ್‌ಸ್ಟಾಗ್ರಾಮ್‌ ಗೆ ನಿಷೇಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News