ಅತ್ಯಂತ ವಿರಳ ಗುಂಪಿನ ರಕ್ತದಾನ ಮಾಡಿ ಬಾಲಕಿಯ ಪ್ರಾಣ ಉಳಿಸಲು ಭೋಪಾಲದಿಂದ ನಾಗ್ಪುರಕ್ಕೆ ಪ್ರಯಾಣಿಸಿದ ವಿಮಾ ಉದ್ಯೋಗಿ

Update: 2022-09-23 12:06 GMT

ನಾಗ್ಪುರ್: ಗೊಂಡಿಯಾ ಗ್ರಾಮದ ನಿವಾಸಿ, ಅನೀಮಿಯಾದಿಂದ(Anemia) ಬಳಲುತ್ತಿರುವ 17 ವರ್ಷದ ಹುಡುಗಿಯ ಜೀವ ಉಳಿಸಲು ಭೋಪಾಲದ(Bhopal) ವ್ಯಕ್ತಿಯೊಬ್ಬರು ರಾತ್ರೋರಾತ್ರಿ ನಾಗ್ಪುರಕ್ಕೆ(Nagpur) ಪ್ರಯಾಣಿಸಿ ಅತ್ಯಂತ ವಿರಳ ಎ2ಬಿ(A2B) ಪಾಸಿಟಿವ್ ಗುಂಪಿನ ತಮ್ಮ ರಕ್ತದಾನ ಮಾಡಿದ್ದಾರೆ.

ಚಾಂದನಿ ಕುರ್ಸುಂಗೆ ಎಂಬಾಕೆಯನ್ನು ಅನೀಮಿಯಾ ಸಮಸ್ಯೆಯಿಂದಾಗಿ ಗೊಂಡಿಯಾ ಜಿಎಂಸಿಎಚ್‍ಗೆ ದಾಖಲಿಸಲಾಗಿತ್ತು. ಆದರೆ ಆರು ದಿನಗಳಿಂದ ಈ ಗುಂಪಿನ ರಕ್ತದಾನಿಗಳಿಗಾಗಿ ಆಕೆ ಕಾದಿದ್ದಳು. ಜಗತ್ತಿನ ಜನಸಂಖ್ಯೆಯ 0.6-1.4% ದಷ್ಟು ಮಂದಿಯ ರಕ್ತದ ಗುಂಪು ಇದಾಗಿದೆ.

ಆಕೆಯ ಪರಿಸ್ಥಿತಿಯ ಬಗ್ಗೆ ತಿಳಿದ ಎಚ್‍ಡಿಎಫ್‍ಸಿ ಲೈಫ್ ಉದ್ಯೋಗಿ ಹಿತೇಶ್ ಅರೋರಾ ಆಕೆಗೆ ರಕ್ತದಾನ ಮಾಡಲು ನಿರ್ಧರಿಸಿದರು. ಅರೋರಾ ಅವರ ರಕ್ತದ ಗುಂಪು ಕೂಡ ಎ2ಬಿ ಆಗಿದ್ದರಿಂದ  ಅವರು ವಿರಳ ರಕ್ತದಾನಿಗಳ ಗುಂಪಿಗೆ ಸೇರಿದ್ದರು. ಈ ಹಿಂದೆ ಅವರು ರೇವಾದ ಯುವತಿಯೊಬ್ಬಳಿಗೆ ಎಪ್ರಿಲ್ 2022 ರಲ್ಲಿ ರಕ್ತದಾನ ಮಾಡಿದ್ದರು.

ಈಗಿನ ಪ್ರಕರಣದಲ್ಲಿ  ಹುಡುಗಿಯ ಸಮಸ್ಯೆಯ ಬಗ್ಗೆ ಗೊಂಡಿಯಾ ಮತ್ತು ನಾಗ್ಪುರ್ ನ ಆಸ್ಪತ್ರೆಗಳಿಂದ ದೃಢಪಡಿಸಿಕೊಂಡು ನಾಗ್ಪುರ್ ಗೆ ರಾತ್ರಿ ರೈಲಿನಲ್ಲಿ ಸಂಚರಿಸಿದ್ದರು. ಅಲ್ಲಿ ಅವರಿಗಾಗಿ ನಾಗ್ಪುರ್ ಸೇವಾ ಫೌಂಡೇಶನ್ ಪ್ರತಿನಿಧಿಗಳು ಕಾದಿದ್ದರು ಹಾಗೂ ನೇರವಾಗಿ ಹುಡುಗಿ ದಾಖಲಾಗಿರುವ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ 2 ಗಂಟೆಗಳೊಳಗೆ ರಕ್ತದಾನ ಮುಗಿದು ಅವರು ಭೋಪಾಲಕ್ಕೆ ಮರಳಿದರು. ಹುಡುಗಿಗೆ ಮತ್ತೆ ರಕ್ತದ ಅವಶ್ಯಕತೆ ಎದುರಾದರೆ ಮತ್ತೆ ರಕ್ತದಾನ ಮಾಡುವ ಉದ್ದೇಶದಿಂದ ಆಕೆಯ ಕುಟುಂಬದ ಜೊತೆಗೆ ಸಂಪರ್ಕದಿಂದಿರುವುದಾಗಿಯೂ ಅವರು ತಿಳಿಸಿದರು.

ಇದನ್ನೂ ಓದಿ: 370 ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News