ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಅತ್ಯಂತ ಶ್ರೀಮಂತ ಅನಿವಾಸಿ ಭಾರತೀಯ

Update: 2022-09-23 13:11 GMT
ವಿನೋದ್ ಶಾಂತಿಲಾಲ್ ಅದಾನಿ (Photo: Arabian Business) 

ಹೊಸದಿಲ್ಲಿ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ(Gautam Adani) ಅವರ ಹಿರಿಯ ಸಹೋದರ, ಉದ್ಯಮಿಯೂ ಆಗಿರುವ ವಿನೋದ್ ಶಾಂತಿಲಾಲ್ ಅದಾನಿ (Vinod Shantilal Adani) ಅವರು 'ಐಐಎಫ್‍ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2022' ಪ್ರಕಾರ ಭಾರತದ ಅತ್ಯಂತ ಶ್ರೀಮಂತ NRI (ಅನಿವಾಸಿ ಭಾರತೀಯ) ಆಗಿದ್ದಾರೆ. ಈ ಪಟ್ಟಿಯಲ್ಲಿ ವಿನೋದ್ ಅವರು ಭಾರತದ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ ರೂ. 1.69 ಲಕ್ಷ ಕೋಟಿ ಆಗಿದೆ.

ಈ ಪಟ್ಟಿಯಲ್ಲಿ ಶ್ರೀಮಂತ ಎನ್ನಾರೈಗಳ ಪೈಕಿ ಹಿಂದುಜಾ ಸಹೋದರರು ಎರಡನೇ ಸ್ಥಾನದಲ್ಲಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ ರೂ 1.65 ಲಕ್ಷ ಕೋಟಿಯಾಗಿದೆ.

ಅಮೆರಿಕಾದಲ್ಲಿರುವ ಅತ್ಯಂತ ಶ್ರೀಮಂತ ಎನ್ನಾರೈ ಆಗಿ ಜಯ್ ಚೌಧುರಿ ಅವರ ಹೆಸರು ಪಟ್ಟಿಯಲ್ಲಿದೆ. ಅವರ ಒಟ್ಟು ಸಂಪತ್ತಿನ  ಮೌಲ್ಯ ರೂ. 70,000 ಕೋಟಿ ಆಗಿದೆ.

ಗೌತಮ್ ಅದಾನಿ ಅವರ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಅವರು ದುಬೈಯಲ್ಲಿ ವಾಸಿಸುತ್ತಿದ್ದು ಸಿಂಗಾಪುರ, ದುಬೈ ಮತ್ತು ಜಕಾರ್ತದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅವರು ಮೊದಲು ಮುಂಬೈನಲ್ಲಿ 1976 ರಲ್ಲಿ ಟೆಕ್‍ಸ್ಟೈಲ್ ಉದ್ಯಮ ಆರಂಭಿಸಿ ನಂತರ ಸಿಂಗಾಪುರಕ್ಕೆ ತಮ್ಮ ಉದ್ಯಮ ವಿಸ್ತರಿಸಿದ್ದರು. ಮುಂದೆ ಮಧ್ಯ ಪೂರ್ವ ರಾಷ್ಟ್ರಗಳಿಗೂ ವ್ಯವಹಾರ ವಿಸ್ತರಿಸಿದ್ದಾರೆ. ಅವರು 1994 ರಿಂದ ದುಬೈಯಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವರ್ಷ ಅವರ ಒಟ್ಟು ಸಂಪತ್ತಿಗೆ ರೂ. 37,400 ಕೋಟಿ ಸೇರ್ಪಡೆಗೊಂಡಿದ್ದು ಒಟ್ಟು ಸಂಪತ್ತು ಏರಿಕೆ ಪ್ರಮಾಣ ಶೇ 28ರಷ್ಟಾಗಿದೆ. ಅಂದರೆ ಅವರು ದಿನವೊಂದಕ್ಕೆ ಸರಾಸರಿ ರೂ. 102 ಕೋಟಿ ಗಳಿಸುತ್ತಾರೆ ಎಂದು ವರದಿಯಾಗಿದೆ.

ಅವರ ಸಂಪತ್ತು ಕಳೆದ ಐದು ವರ್ಷಗಳಲ್ಲಿ ಶೇ. 850ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಸರಕಾರದ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News