ಆರೆಸ್ಸೆಸ್ ಮುಖ್ಯಸ್ಥರ ಮಸೀದಿ, ಮದರಸಾ ಭೇಟಿಯಿಂದ ಬಿಜೆಪಿಯ ಮುಸ್ಲಿಂ ವಿರೋಧಿ ಧೋರಣೆ ಬದಲಾಗುವುದೇ?: ಮಾಯಾವತಿ

Update: 2022-09-23 12:56 GMT
ಮಾಯಾವತಿ 

ಲಕ್ನೋ: ಆರೆಸ್ಸೆಸ್(RSS) ಮುಖ್ಯಸ್ಥ ಮೋಹನ್ ಭಾಗ್ವತ್ (Mohan Bhagwat) ಅವರು ದಿಲ್ಲಿಯ ಮಸೀದಿ ಹಾಗೂ ಮದರಸಾ ಒಂದಕ್ಕೆ ಭೇಟಿ ನೀಡಿದ ನಂತರ ಬಿಜೆಪಿ ಹಾಗೂ ಅದರ ಸರಕಾರಗಳ ಮುಸ್ಲಿಮರ ವಿರುದ್ಧದ ಖಣಾತ್ಮಕ ಧೋರಣೆಯಲ್ಲಿ ಬದಲಾವಣೆಯಾಗಲಿದೆಯೇ ಎಂದು ಬಹುಜನ ಸಮಾಜ ಪಕ್ಷದ(BSP) ಅಧ್ಯಕ್ಷೆ ಮಾಯಾವತಿ(Mayawati) ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಮಾಯಾವತಿ, "ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮಸೀದಿ/ಮದರಸಾಗೆ ನಿನ್ನೆ ಭೇಟಿ ನೀಡಿ ನಂತರ ಉಲಮಾಗಳ ಜೊತೆಗೆ ಮಾತನಾಡಿದ್ದಾರೆ, ನಂತರ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಲಾಯಿತು. ಹೀಗಿರುವಾಗ ಬಿಜೆಪಿ ಮತ್ತದರ ಸರಕಾರಗಳ ಮುಸ್ಲಿಂ ಸಮಾಜ ಮತ್ತು ಮಸೀದಿ-ಮದರಸಾಗಳ ಕುರಿತ ಋಣಾತ್ಮಕ ಧೋರಣೆ ಬದಲಾಗುವುದೇ?'' ಎಂದು ಪ್ರಶ್ನಿಸಿದ್ದಾರೆ.

"ಉತ್ತರ ಪ್ರದೇಶ ಸರಕಾರಕ್ಕೆ ತೆರೆದ ಸ್ಥಳಗಳಲ್ಲಿ ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸುವುದನ್ನು ತಾಳಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸರಕಾರಿ ಮದರಸಾಗಳನ್ನು ಕಡೆಗಣಿಸುವ ಸರಕಾರ, ಖಾಸಗಿ ಮದರಸಾಗಳ ಕಾರ್ಯನಿರ್ವಹಣೆಯಲ್ಲೂ ಹಸ್ತಕ್ಷೇಪ ನಡೆಸುತ್ತಿದೆ. ಈ ಕುರಿತು ಆರೆಸ್ಸೆಸ್ ಮುಖ್ಯಸ್ಥರ ಮೌನ ಯಾವ ಅರ್ಥ ನೀಡುತ್ತದೆ ಎಂಬ ಕುರಿತು ಚಿಂತಿಸಬೇಕು,''ಎಂದು ಇನ್ನೊಂದು ಟ್ವೀಟ್‍ನಲ್ಲಿ ಮಾಯಾವತಿ ಬರೆದಿದ್ದಾರೆ.

ಗುರುವಾರ ಭಾಗ್ವತ್ ಅವರ ಮಸೀದಿ ಮತ್ತು ಮದರಸಾ ಭೇಟಿಯ ನಂತರ ಆಲ್ ಇಂಡಿಯಾ ಇಮಾಮ್ ಆರ್ಗನೈಜೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ಭಾಗ್ವತ್ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಿದ್ದಾಗಿ ವರದಿಯಾಗಿತ್ತು. 

ಇದನ್ನೂ ಓದಿ: ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಭಾರತದ ಅತ್ಯಂತ ಶ್ರೀಮಂತ ಎನ್ನಾರೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News