ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ವಾಹನ ಪಲ್ಟಿ

Update: 2022-09-25 05:31 GMT

ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ  ವಾಹನವೊಂದು ಪಲ್ಟಿಯಾದ ಘಟನೆ ಕೋಟ  ಸಮೀಪದ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.   

ಉಡುಪಿಯಿಂದ ಹೆಮ್ಮಾಡಿ ಮೂಲಕವಾಗಿ ಕೊಲ್ಲೂರಿನ ಕಡೆ ತರಕಾರಿ ತುಂಬಿಸಿಕೊಂಡು ಸಾಗುತ್ತಿದ್ದ ಗೂಡ್ಸ್ ವಾಹನದ ಟಯರ್ ಸ್ಫೋಟಗೊಂಡ ಕಾರಣ ಚಾಲಕನ  ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.

ಘಟನೆ ಪರಿಣಾಮ ವಾಹನದಲ್ಲಿದ್ದ ತರಕಾರಿಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಅದೃಷ್ಟವಶಾತ್  ಚಾಲಕ  ಹಾಗೂ ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಧುರೈ: ಆರೆಸ್ಸೆಸ್ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆತ; ದೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News