ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಆಪ್ ಗೆ ಕೋರ್ಟ್ ಸೂಚನೆ

Update: 2022-09-27 06:57 GMT
Photo:NDTV

ಹೊಸದಿಲ್ಲಿ: ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ದಿಲ್ಲಿ ಹೈಕೋರ್ಟ್  ಸೂಚಿಸಿದೆ.

ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಖಾದಿ ಪ್ರಕರಣದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಕಾಮೆಂಟ್ ಗಳನ್ನು ಪ್ರಕಟಿಸದಂತೆ ಎಎಪಿ ಶಾಸಕರನ್ನು ತನ್ನ  ಮಧ್ಯಂತರ ಆದೇಶದಲ್ಲಿ ದಿಲ್ಲಿ ಹೈಕೋರ್ಟ್ ನಿರ್ಬಂಧಿಸಿದೆ.

ತನ್ನ ಹಾಗೂ  ತನ್ನ ಕುಟುಂಬದ ಮೇಲೆ ಎಎಪಿ ನಾಯಕರು ಮಾಡುತ್ತಿರುವ  "ಸುಳ್ಳು" ಆರೋಪಗಳನ್ನು ನಿರ್ಬಂಧಿಸುವಂತೆ ದಿಲ್ಲಿ ಹೈಕೋರ್ಟ್‌ಗೆ ಸಕ್ಸೇನಾ ಅವರು ಮನವಿ ಮಾಡಿದ್ದರು. ಸಕ್ಸೇನಾ ಅವರು ಖಾದಿ ಹಾಗೂ  ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1,400 ಕೋಟಿ ರೂ.ಹಗರಣದಲ್ಲಿ ಅವರ ಪಾತ್ರವಿದೆ ಎಂದು ಎಎಪಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News