ಮಂಗಳ ಗ್ರಹದಲ್ಲಿ ಈಗಲೇ 7118 ಕೆಜಿ ತ್ಯಾಜ್ಯ!

Update: 2022-09-27 17:23 GMT
Photo : NDTV

ಪ್ಯಾರಿಸ್, ಸೆ. 27: ಸುಮಾರು 50 ವರ್ಷಗಳ ಹಿಂದೆ ಮಂಗಳ ಗ್ರಹದ ಶೋಧ ಕಾರ್ಯಾಚರಣೆ ಆರಂಭಿಸಿರುವ ಮಾನವ ಕುಲವು, ಅಲ್ಲಿಗೆ ಹಲವು ಬಾಹ್ಯಾಕಾಶ ನೌಕೆಗಳನ್ನು ಈಗಾಗಲೇ ಕಳುಹಿಸಿದೆ. 2030ರ ದಶಕದ ವೇಳೆಗೆ ಅಲ್ಲಿಗೆ ಮೊದಲ ಬಾರಿಗೆ ಮಾನವನನ್ನು ಕಳುಹಿಸುವ ಯೋಜನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೊಂದಿದೆ.

ಮಂಗಳ ಗ್ರಹದ ಮೇಲೆ ಮಾನವ ಕಾಲಿಡಲು ಇನ್ನೂ ತುಂಬಾ ಸಮಯವಿದೆಯಾದರೂ, ಅಲ್ಲಿ ಕಸವನ್ನು ಹರಡುವುದರಿಂದ ಮಾನವರೇನೂ ಹಿಂದೆ ಬಿದ್ದಿಲ್ಲ. ‘‘ಕೆಂಪು ಗ್ರಹದಲ್ಲಿ ಈಗಾಗಲೇ 7118.6 ಕೆಜಿ ಮಾನವ ನಿರ್ಮಿತ ತ್ಯಾಜ್ಯ ಜಮಾವಣೆಯಾಗಿದೆ’’ ಎಂದು ವೆಸ್ಟ್ ವರ್ಜೀನಿಯ ವಿಶ್ವವಿದ್ಯಾನಿಲಯದಲ್ಲಿ ರೋಬೊಟಿಕ್ಸ್‌ನಲ್ಲಿ ರಿಸರ್ಚ್ ಫೆಲೋ ಆಗಿರುವ ಕ್ಯಾಗ್ರಿ ಕಿಲಿಕ್ ಹೇಳುತ್ತಾರೆ.

ಇದನ್ನು ಲೆಕ್ಕ ಹಾಕಲು ಮಂಗಳ ಗ್ರಹಕ್ಕೆ ಕಳುಹಿಸಲಾಗಿರುವ ಎಲ್ಲಾ ಶೋಧಕಗಳ ದ್ರವ್ಯರಾಶಿಯನ್ನು ಲೆಕ್ಕ ಮಾಡಿ ಅದರಿಂದ ಈಗಲೂ ಕ್ರಿಯಾಶೀಲವಾಗಿರುವ ಶೋಧಕಗಳ ದ್ರವ್ಯರಾಶಿಯನ್ನು ಕಳೆಯಲಾಗಿದೆ.

ವಿವಿಧ ದೇಶಗಳು 18 ಮಾನವ ನಿರ್ಮಿತ ಶೋಧಕ ನೌಕೆಗಳನ್ನು ಈಗಾಗಲೇ ಮಂಗಳಕ್ಕೆ ಕಳುಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News