ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಳ್ಳಲಿ: ಸಂಸದ ಅಬ್ದುಲ್ ಖಲೀಕ್ ಆಗ್ರಹ

Update: 2022-09-29 05:07 GMT
Photo:PTI

ಹೊಸದಿಲ್ಲಿ: ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ವಿಚಾರದಲ್ಲಿ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್  Congress MP Abdul Khaleque ಅವರು ಪ್ರಿಯಾಂಕಾ ಗಾಂಧಿ ವಾದ್ರಾ Priyanka Gandhi Vadra  ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.  ವಾದ್ರಾ ಕುಟುಂಬದ ಸೊಸೆಯಾಗಿರುವ ಅವರು ಭಾರತೀಯ ಸಂಪ್ರದಾಯದಂತೆ ಗಾಂಧಿ ಕುಟುಂಬದ ಸದಸ್ಯರಾಗಿ ಉಳಿದಿಲ್ಲ. ಹೀಗಾಗಿ ಅವರು ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಬೇಕೆಂದು  ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟಿಸಿದ ಅಸ್ಸಾಂನ ಬಾರ್ಪೇಟಾದ ಕಾಂಗ್ರೆಸ್ ಸಂಸದ ಖಲೀಕ್, " ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ  ಅಧ್ಯಕ್ಷರಾಗಲು ನಿರಾಕರಿಸುತ್ತಿರುವುದರಿಂದ, ನಾನು ಪ್ರಿಯಾಂಕಾ ಗಾಂಧಿ ಅವರನ್ನು ಅತ್ಯುತ್ತಮ ಅಭ್ಯರ್ಥಿ ಎಂದು ಪರಿಗಣಿಸುತ್ತೇನೆ. ವಾದ್ರಾ ಕುಟುಂಬದ ಸೊಸೆಯಾಗಿರುವ ಅವರು ಭಾರತೀಯ ಸಂಪ್ರದಾಯದ ಪ್ರಕಾರ ಗಾಂಧಿ ಕುಟುಂಬದ ಸದಸ್ಯರಾಗಿಲ್ಲ" ಎಂದು ಹೇಳಿದ್ದಾರೆ.

“ಪ್ರಿಯಾಂಕಾ ಜಿವಿ ಕಾಂಗ್ರೆಸ್ ಮುಖ್ಯಸ್ಥೆಯಾಗಬೇಕು. ಗಾಂಧಿ ಕುಟುಂಬದಿಂದ ಯಾರೂ ಅಧ್ಯಕ್ಷರಾಗಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮಹಿಳೆ ಮದುವೆಯ ನಂತರ ಅವರು ಹೋಗುವ ಕುಟುಂಬದ ಭಾಗವಾಗುತ್ತಾರೆ. ಇಂದು ಪ್ರಿಯಾಂಕಾ ಅವರು ವಾದ್ರಾ ಕುಟುಂಬದ ಸೊಸೆ, ಗಾಂಧಿ ಕುಟುಂಬದ ಭಾಗವಲ್ಲ’’ ಎಂದು ಖಲೀಕ್ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರ ಆಶಯವನ್ನು ನಾನು ಗೌರವಿಸುತ್ತೇನೆ, ಆದರೆ ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ ಕೆಲವು ದಿನಗಳ ನಂತರ ಖಲೀಕ್  ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News